ಡಿಸಿಪಿ ಕೃಷ್ಣಕಾಂತಗೆ ಭೇಟಿಯಾಗಲು ಅವಕಾಶ ನೀಡದ ಪೊಲೀಸ್ ಕಮೀಷನರ್ ಆರ್.ದಿಲೀಪ್: ಕಮೀಷನರೇಟ್ ಒಳಜಗಳ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಎಲ್ಲವೂ ಸರಿಯಿಲ್ಲವೆಂಬ ವದಂತಿಗಳಿಗೆ ಪುಷ್ಠಿ ನೀಡುವಂತ ಘಟನೆಯೊಂದು ನಡೆದಿದ್ದು, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಆರ್.ದಿಲೀಪ್ ಡಿಸಿಪಿ ಕೃಷ್ಣಕಾಂತರವನ್ನ ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲವೆಂದು ಕಮೀಷನರಗೆ ಪತ್ರವೊಂದನ್ನ ಬರೆದಿದ್ದು, ಪ್ರತಿಯನ್ನ ಪೊಲೀಸ್ ಮಹಾನಿರ್ದೇಶಕರಿಗೂ ಕಳಿಸಿದ್ದಾರೆ.
ಸೂಕ್ಷ್ಮವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಪಿ ಕೃಷ್ಣಕಾಂತರವರು ಪೊಲೀಸ್ ಕಮೀಷನರ್ ಗೆ ಭೇಟಿಯಾಗಲು ಪ್ರಯತ್ನ ಮಾಡುತ್ತಿದ್ದರೂ, ಯಾವುದೇ ರೀತಿಯ ಸ್ಪಂಧನೆ ದೊರಕಿಲ್ಲವೆಂದು ಪತ್ರದಲ್ಲಿ ನಮೂದಿಸಲಾಗಿದೆ.
ಪೊಲೀಸ್ ಕಮೀಷನರ್ ಅವರನ್ನ ಭೇಟಿಯಾಗಲು ಒಂದೂವರೆ ಗಂಟೆ ಕಾದರೂ ಭೇಟಿಯಾಗಲು ಅವಕಾಶ ನೀಡಿಲ್ಲ. ಹಾಗಾಗಿಯೇ ಕಂಟ್ರೋಲ್ ರೂಮ್ ಮುಖಾಂತರ ಪತ್ರವನ್ನ ಸಲ್ಲಿಸಿದ್ದೇನೆಂದು ಡಿಸಿಪಿ ಕೃಷ್ಣಕಾಂತ ಪತ್ರದಲ್ಲಿ ಹೇಳಿಕೊಂಡಿದ್ದಾರೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಚೇರಿ ಬಿಟ್ಟು ಹೊರಗೆ ಬಂದು ಕೆಲಸ ಮಾಡಿ ಎಂದು ಹೇಳಿದ ಮೇಲೂ ಇಲಾಖೆಯಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದು ಈ ಮೂಲಕ ಹೊರಗಡೆ ಬಿದ್ದಿದ್ದು, ಪೊಲೀಸ್ ಆಯುಕ್ತ ಆರ್.ದಿಲೀಪ್ ಅವರಿಗೆ ಭೇಟಿಯಾಗಲು ಅವಕಾಶವನ್ನ ಕೊಡ್ತಾರಾ ಕಾದು ನೋಡಬೇಕಿದೆ.