ಕೊಲೆ: ಒಬ್ಬ ಅನಾಥ- ಡಬಲ್ ಮರ್ಡರ್ ಆದ್ರೂ “ಸಿಓಪಿ” ಮಾತಾಡೋಲ್ಲ..!
ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ರಾತ್ರೋರಾತ್ರಿ ಎರಡು ಯುವಕರ ಕೊಲೆ ನಡೆದರೂ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರು ಘಟನೆಯ ಬಗ್ಗೆ ಒಂದೇ ಒಂದು ಹೇಳಿಕೆಯನ್ನ ನೀಡದೇ ಹೋದ ಘಟನೆ ಗೋಪನಕೊಪ್ಪದ ಕೊಲೆ ನಡೆದ ಪ್ರದೇಶದಲ್ಲಿ ಸಂಭವಿಸಿತು.
ಈ ಭಾಗದ ಜನರು ಬೆಚ್ಚಿ ಬೀಳಿಸಿದ ಕೊಲೆ ಪ್ರಕರಣದ ಮಾಹಿತಿಯನ್ನ ನೀಡಿ, ಜನರಿಂದ ಭಯ ದೂರ ಮಾಡಬೇಕಾದ ಆಯುಕ್ತರು ಹೀಗೇಕೆ ಮಾಡುತ್ತಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಸಾರ್ವಜನಿಕ ವಲಯದಲ್ಲಿ ಏನೇ ಅವಘಡ ನಡೆದರೂ ಅದಕ್ಕೆ ಬೇಕಾದ ಅಧಿಕೃತ ಮಾಹಿತಿಯನ್ನ ಪೊಲೀಸ್ ಕಮೀಷನರ್ ನೀಡಬೇಕು ಇಲ್ಲವೇ ಅವರ ಕೆಳಗಿನ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚನೆ ಮಾಡಬೇಕು. ಸೋಜಿಗವೆಂದರೇ, ಯಾವುದೇ ಮಾಹಿತಿಯನ್ನ ನೀಡಲು ಹಿಂದೇಟು ಹಾಕಲಾಗುತ್ತಿದೆ. ಕಾರಣ ಮಾತ್ರ..
ಗೋಪನಕೊಪ್ಪದಲ್ಲಿ ನಡೆದಿರುವ ಡಬಲ್ ಮರ್ಡರನಲ್ಲಿ ಒಬ್ಬನಿಗೆ ತಂದೆ-ತಾಯಿಯೇ ಇಲ್ಲ. ಇನ್ನೋಬ್ಬ ಯುವಕನಿಗೆ ಕಳೆದ ತಿಂಗಳಷ್ಟೇ ಮನೆಯ ಪಕ್ಕದ ಪಂಚರ್ ಅಂಗಡಿಯಾತ ಹೊಡೆದಿದ್ದ. ಅದೇ ಕಾರಣಕ್ಕೆ 15ದಿನಗಳ ಹಿಂದೆ ಆಪ್ ರೇಷನ್ ಮಾಡಿಸಿಕೊಂಡಿದ್ದ ಎಂದು ಮಾಹಿತಿ ಲಭ್ಯವಾಗಿದೆ.
ಕೊಲೆಯಾಗಿರುವ ನಿಯಾಜ ಜೋರಮ್ಮನವರ ಮತ್ತು ಮಂಜುನಾಥ ಕಬ್ಬಿನ ಮಾದಕ ವಸ್ತುವನ್ನ ಸೇವನೆ ಮಾಡಿದ್ದರೆಂದು ಕೂಡಾ ಹೇಳಲಾಗುತ್ತಿದೆ. ನಿಯಾಜ ಜೋರಮ್ಮನವರ ಸಿದ್ಧರಾಮನಗರದ ನಿವಾಸಿಯಾಗಿದ್ದು, ಇನ್ನೋರ್ವ ಗೋಪನಕೊಪ್ಪದ ನಿವಾಸಿಯಾಗಿದ್ದಾನೆ. ಕೇಶ್ವಾಪುರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದ್ದು, ಪೊಲೀಸ್ ಆಯುಕ್ತ ಆರ್.ದಿಲೀಪ ಕೂಡಾ ಬಂದು ಹೋದರು.