ಹುಬ್ಬಳ್ಳಿಯಲ್ಲಿ ಡಬಲ್ ಮರ್ಡರ್: ಬೆಚ್ಚಿಬಿದ್ದ ವಾಣಿಜ್ಯ ನಗರಿ
ಹುಬ್ಬಳ್ಳಿ: ಕೂಡಿ ನಡೆದಾಡುತ್ತಿದ್ದ ಗೆಳೆಯರೇ ವೈರಿಗಳಾಗಿ ನಂತರ ತಮ್ಮ ತಮ್ಮ ಬಡಿದಾಡಿಕೊಂಡು ಕೊಲೆಯಾಗಿರುವ ಘಟನೆ ತಡರಾತ್ರಿ ಗೋಪನಕೊಪ್ಪದ ಬಳಿ ಸಂಭವಿಸಿದ್ದು, ನಗರವೇ ಬೆಚ್ಚಿಬಿದ್ದಿದೆ.
ವಡ್ಡರ ಓಣಿಯ ಮಂಜುನಾಥ ಕಬ್ಬಿನ ಹಾಗೂ ನಿಯಾಜ್ ಜೋರಮ್ಮನವರ ಕೊಲೆಯಾದ ಯುವಕರಾಗಿದ್ದು, ಇಬ್ಬರಿಗೂ ರಾಡ್ ನಿಂದ ಹಲ್ಲೆ ಮಾಡಲಾಗಿದೆ. ಕಳೆದ ಹಲವು ದಿನಗಳಿಂದ ೆರಡು ಗುಂಪಿನಲ್ಲಿ ದ್ವೇಷ ಮನೆ ಮಾಡಿತ್ತು ಎನ್ನಲಾಗಿದೆ.
ಮಂಜುನಾಥ ಕಬ್ಬಿನ ಜೊತೆ ಆಗಾಗ ನಿಯಾಜ್ ಜೋರಮ್ಮನವರ ಜಗಳವಾಡುತ್ತಿದ್ದ ಅದೇ ಕಾರಣಕ್ಕೆ ಹೇಗಾದರೂ ಮಾಡಿ, ನಿಯಾಜನನ್ನ ಹೊಡೆಯಬೇಕೆಂದು ಮಂಜುನಾಥ ತಿರುಗಾಡುತ್ತಿದ್ದ ಹಾಗಾಗಿಯೇ ನಿನ್ನೆಯಿಂದ ಹುಡುಕಾಡುತ್ತಿದ್ದ ಸಮಯದಲ್ಲಿ ಹೊಟೇಲ್ ಬಳಿ ನಿಯಾಜ್ ಸಿಕ್ಕಿದ್ದಾನೆ. ಆಗ ಮಂಜುನಾಥನ ಜೊತೆಗೆ ಬಂದವರು ರಾಡ್ ನಿಂದ ಹೊಡೆಯಲು ಆರಂಭಿಸಿದ್ದಾರೆ.
ಇಷ್ಟೇಲ್ಲ ನಡೆಯುತ್ತಿದ್ದಾಗ ನಿಯಾಜ್ ಕೂಡಾ ಹೊಡೆಯುತ್ತಿದ್ದಾಗ ಸ್ನೇಹಿತರಾಗಿದ್ದವರೇ ತೀವ್ರ ರಕ್ತಸ್ರಾವವಾಗಿ ಸಾವಿಗೀಡಾಗಿದ್ದಾರೆ. ಇಬ್ಬರನ್ನೂ ಕಿಮ್ಸ್ ಗೆ ರವಾನೆ ಮಾಡಲಾಯಿತಾದರೂ, ಚಿಕಿತ್ಸೆ ಫಲಿಸದೇ ಇಬ್ಬರು ಸಾವಿಗೀಡಾಗಿದ್ದಾರೆ.
ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.