ಸಹೋದರರ ಕೊಲೆ ಮಾಡಿದ ಪಕ್ಕದ ಮನೆಯವರು: ಲಾಕ್ ಡೌನ್ ಸಡಿಲವಾದ ತಕ್ಷಣವೇ ಕೊಲೆ

ಕಲಬುರಗಿ: ಕೊರೋನಾ ವೈರಸ್ ಜಿಲ್ಲೆಯಲ್ಲಿ ತಾಂಡವವಾಡುತ್ತಿರುವ ನಡುವೆಯೂ ಲಾಕ್ ಡೌನ್ ಸಡಿಲಿಕೆಯನ್ನ ಕಾಯುತ್ತಿದ್ದ ಗುಂಪೊಂದು ಸಹೋದರರನ್ನ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಜೇವರ್ಗಿ ತಾಲೂಕಿನ ಅಂಕಲಗಾ ಗ್ರಾಮದಲ್ಲಿ ನಡೆದಿದೆ.
ನೆಲೋಗಿ ಪೊಲೀಸ್ ಠಾಣೆ ವ್ಯಾಫ್ತಿಯಲ್ಲಿ ಯಲ್ಲಾಲಿಂಗ ಮತ್ತು ಗಂಗಣ್ಣ ಎಂಬ ಸಹೋದರರನ್ನೇ ಕೊಲೆ ಮಾಡಿದ್ದು, ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರುವ ಆರೋಪಿಗಳು, ಹಳೆಯ ದ್ವೇಷವೇ ಇದಕ್ಕೆ ಕಾರಣವೆಂದು ಹೇಳಲಾಗಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.