“ಡೊನೇಷನ್” ಕುರಿತು ಯಾರಾದರೂ “ಧ್ವನಿ” ಎತ್ತುತ್ತೀರಾ…ವಿದ್ಯಾಕಾಶಿಯಲ್ಲಿ ವಿದ್ಯಾ’ಕಾಸು’ ಹಾವಳಿ…!?

ಧಾರವಾಡ: ಶಾಲಾ-ಕಾಲೇಜುಗಳು ಆರಂಭವಾಗಿವೆ ಮತ್ತೂ ಇನ್ನೂ ಮುಂದುವರೆದು ದಾಖಲಾತಿಗಳು ನಡೆಯುತ್ತಿವೆ. ಶಿಕ್ಷಣದ ಮಾರಾಟ ಯಾವ ಮಟ್ಟಕ್ಕೆ ಹೋಗಿದೆ ಎಂಬ ಬಗ್ಗೆ ಒಬ್ಬರಾದರೂ ಧ್ವನಿಯೆತ್ತಲು ಮುಂದಾಗದೇ ಇರುವುದು ಸೋಜಿಗ ಮೂಡಿಸತೊಡಗಿದೆ.
ಧಾರವಾಡ ಎಂಬ ನಗರಿಯನ್ನ ವಿದ್ಯಾಕಾಶಿ ಎಂದು ಕರೆಯುತ್ತಿರುವುದು ಎಲ್ಲರಿಗೂ ತಿಳಿದಿರುವುದು ವಿಚಾರವಾಗಿದೆ. ಆದರೀಗ ವಿದ್ಯಾ ‘ಖಾಸ್’ ಆಗಿದೆ. ಹಲವು ಶಾಲೆಗಳಲ್ಲಿ ಲಕ್ಷಾಂತರ ರೂಪಾಯಿ ಹಣವನ್ನ ಪೀಕುವುದು ರೂಢಿಯಾಗಿದೆ. ಅದಕ್ಕೂ ಪರೀಕ್ಷೆ ಬೇರೆ.
ಹೌದು… ಅವಳಿನಗರದ ಕೆಲ ಪ್ರಮುಖ ಶಾಲೆಗಳಲ್ಲಿ ಪಾಲಕರಿಂದ ಸಾವಿರಾರು ರೂಪಾಯಿ ಪೀಕಲಾಗುತ್ತಿದೆ. ಇನ್ನೂ ಕೆಲವರಂತೂ ಆರನೇಯ ತರಗತಿಗೆ ಹಾಸ್ಟೆಲ್ ನೆಪದಲ್ಲಿ ಲಕ್ಷಾಂತರ ರೂಪಾಯಿ ಪಡೆಯತೊಡಗಿದ್ದಾರೆ. ಹೇಳುವವರು ಇಲ್ಲಾ ಕೇಳುವವರಂತೂ ಮಾಯವಾಗಿದ್ದಾರೆ.
ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆಯುವುದು ಹಲವು ಪಾಲಕರಿಗೂ ಪ್ಯಾಷನ್ ಆಗೋಗಿದೆ. ಸರಕಾರಿ ಶಾಲೆಗಳಲ್ಲಿ ಅತ್ಯುತ್ತಮ ಶಿಕ್ಷಕರಿದ್ದರೂ ಅವರನ್ನ ಕಡೆಗಣಿಸಲಾಗತ್ತೆ. ಹಾಗಾಗಿ, ಬೇರೆ ಬೇರೆ ರೂಪದಲ್ಲಿ ಹಣವನ್ನ ಪೀಕುವುದನ್ನ ತಪ್ಪಿಸಲು ಕೊನೆಪಕ್ಷ ಆತ್ಮಸಾಕ್ಷಿ ಹೊಂದಿರುವ (ಇದ್ದರೇ) ಸರಕಾರ ಮಾಡಬೇಕಿದೆ.
ಶಿಕ್ಷಣದ ಹೆಸರಿನಲ್ಲಿ ನಡೆಯುತ್ತಿರುವ ದಂಧೆಯನ್ನ ತಪ್ಪಿಸಲು ಸರಕಾರದ ಕೆಲಸ ದೇವರ ಕೆಲಸ ಎಂದು ಸಂಬಳ ಪಡೆಯುವ ಜನಪ್ರತಿನಿಧಿಗಳು ಮತ್ತೂ ಅಧಿಕಾರಿಗಳು ಮುಂದಾಗಬೇಕಿದೆ. ಇಲ್ಲದಿದ್ದರೇ, ಬಡವರು ಬದುಕುವುದೇ ಕಷ್ಟವಾಗಬಹುದು.
ಧಾರವಾಡ ಜಿಲ್ಲೆಯ ಎಸ್ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಯಾವ ಮಟ್ಟಕ್ಕೀದೆ ಎಂಬುದು ಈಗಾಗಲೇ ಜಗ್‌ಜಾಹೀರಾಗಿದೆ. ಆದರೂ, ಹಣ ಪೀಕುವುದು ಮಾತ್ರ ನಿತ್ಯ ನಿರಂತರವಾಗಿದೆ. ಬ್ರ್ಯಾಂಡ್ ಮಾಡಿದ ಕೆಲವರಂತೂ ಪೂರ್ವ ಪರೀಕ್ಷೆ ನಡೆಸಿ, ಅದರಲ್ಲಿ ಶಾಣ್ಯಾ ಇದ್ದವರಿಗೆ ಮಾತ್ರ ಅಡ್ಮಿಷನ್ ಕೊಡ್ತಾರೆ.
ಶಾಣ್ಯಾ ಇದ್ದವರನ್ನ ಶಾಣ್ಯಾ ಮಾಡಿ, ದೊಡ್ಡದೊಂದು ಬೋರ್ಡ್ ಹಾಕಿ ಅಂಗಡಿ ತೆಗೆಯುವ ವ್ಯವಸ್ಥೆಯನ್ನ ಕೆಲವರು ಮಾಡಿಕೊಂಡು ಸಾಗುತ್ತಿದ್ದಾರೆ. ಇದಕ್ಕೊಂದು ತಾರ್ಕಿಕ ಅಂತ್ಯ ಹಾಡುವ ಪ್ರಯತ್ನ ಆಗತ್ತಾ… ಕಾದು ನೋಡಬೇಕಿದೆ.
ಧಾರವಾಡದ ಊರ ಹೊರಗಿರುವ ಶಾಲೆಯೊಂದು ಆರನೇಯ ತರಗತಿಗೆ ಬರೋಬ್ವರಿ ಒಂದು ಲಕ್ಷ ಹದಿನೈದು ಸಾವಿರ ಪಡೆಯುತ್ತಿದೆ. ಧಾರವಾಡದ ತುದಿಗಿರುವ ಸಂಸ್ಥೆಯೊಂದು ಒಂದನೇಯ ತರಗತಿಗೆ ಬರೋಬ್ಬರಿ 65 ಸಾವಿರ ಪಡೆಯುತ್ರಿದೆ. ಮೂವತೈದು, ನಲವತೈದು ಕಾಮನ್ ಫೀ ರೂಪದ ಹಣ ಪಡೆಯಲಾಗುತ್ತಿದೆ.