Posts Slider

Karnataka Voice

Latest Kannada News

ಶ್ವಾನ ‘ಸೋನಿ’ಗೆ ಸೀಮಂತ ಭಾಗ್ಯ : ಇಂತಹದನ್ನ ನೀವೂ ನೋಡಿರಲಿಕ್ಕಿಲ್ಲ

1 min read
Spread the love

ವಿಜಯಪುರ: ಚೀನಾ ಮತ್ತು ಉತ್ತರ ಕೋರಿಯಾಂತಹ ದೇಶಗಳಲ್ಲಿ ಸಾಕು ಪ್ರಾಣಿಗಳನ್ನು ಹತ್ಯೆಗೈದು ತಿನ್ನುವ ಜಾಯಮಾನದಲ್ಲಿ ಇಲ್ಲೊಂದು ಕುಟುಂಬ ಮುದ್ದಿನ ಪ್ರಾಣಿಗಳನ್ನು ಯಾವ ತರಹ ನೋಡೀಕೊಳ್ಳಬೇಕು ಅನ್ನೋದಕ್ಕೆ ತಾಜಾ ಉದಾಹರಣೆಯಾಗಿ ಐತಿಹಾಸಿಕ ಗುಮ್ಮಟನಗರಿಯಲ್ಲಿ ಘಟನೆಯೊಂದು ನಡೆದಿದೆ.

ಕುಂಬಾರ ಕುಟುಂಬದ ಸದಸ್ಯರು ತಮ್ಮ ಮುದ್ದಿನ ಶ್ವಾನಕ್ಕೆ ಸೀಮಂತ ಕಾರ್ಯ ಮಾಡಿರುವ ಅಪರೂಪದ ಘಳಿಗೆ ಗುಮ್ಮಟನಗರಿಯಲ್ಲಿ ನಡೆದಿದೆ. ವಿಜಯಪುರ ನಗರದ ನಿವಾಸಿ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ ಕುಂಬಾರ ಕುಟುಂಬದವರೆಲ್ಲ ಸೇರಿ ತಮ್ಮ ಮನೆಯ ಮುದ್ದಿನ ಮಗಳು ಎಂಬಂತೆ ಸಾಕಿರುವ ಪಮೋರಿಯನ್ ಶ್ವಾನಕ್ಕೆ (ಸೋನಿ) ಸೀಮಂತ ಕಾರ್ಯವನ್ನು ವಿಜೃಂಭಣೆಯಿಂದ ಮಾಡಿದ್ದಾರೆ.

ಕಳೆದ ಆರು ತಿಂಗಳ ಹಿಂದೆ ಸ್ನೇಹಿತರೊಬ್ಬರಿಂದ ಉಡುಗೊರೆಯಾಗಿ ಕುಲಂಗಿ ನಾಯಿಯನ್ನು ಪಡೆದ ಇವರು ಅದು ಗರ್ಭವತಿಯಾಗಿದ್ದರಿಂದ ಅದಕ್ಕೂ ಸೇಮ್ ಟು ಸೇಮ್ ಗರ್ಭಿಣಿಯಂತೆ ಸೀಮಂತ ಮಾಡಿದ್ದಾರೆ. ಶ್ವಾನಕ್ಕೆ ಸೀರೆಯುಡಿಸಿ, ಅಲಂಕಾರ ಮಾಡಿ, ಕೊರಳಲ್ಲಿ ಚಿನ್ನಾಭರಣ, ಹಾರ ಹಾಕಿ ಆರತಿ ಎತ್ತಿ, ಸೀಮಂತ ಹಾಡುಗಳನ್ನು ಹಾಡುವ ಮೂಲಕ ವಿಶೇಷವಾಗಿ ಸೀಮಂತ ಕಾರ್ಯ ಮಾಡಿದ್ದಾರೆ. ಅಲ್ಲದೆ ಕಾರ್ಯಕ್ರಮಕ್ಕೆ ಅಕ್ಕಪಕ್ಕದ ಮನೆಯವರನ್ನು ಕರೆಯಿಸಿ ಅವರಿಗೂ ಸಹ ಅಲ್ಪೋಪಹಾರದ ವ್ಯವಸ್ಥೆ ಮಾಡಿದ್ದಾರೆ. ಈ ಮೂಲಕ ಶ್ವಾನ ತಮ್ಮ ಮನೆಯ ಮಗಳು ಎಂದು ಅದಕ್ಕೆ ಸೀಮಂತ ಕಾರ್ಯ ಆಯೋಜನೆ ಮಾಡಿದ್ದಾರೆ..

ಇನ್ನು ಶ್ವಾನದ ಸೀಮಂತ ಎಂದಕೂಡಲೇ ಅಕ್ಕಪಕ್ಕದವರು ಬರಲು ಮುಜುಗುರ ಆದ್ರೂ ಸಹ ಸಾಕು ಪ್ರಾಣಿಯಲ್ಲಿ ಮಾನವೀಯತೆ ಮರೆದಿರುವುದು ಕುಂಬಾರ ಕುಟುಂಬದವರ ದೊಡ್ಡಗುಣ. ಹಾಗಾಗಿ ನಾವೆಲ್ಲರೂ ಬಂದು ಅವರ ಮನೆಯ ಮುದ್ದಿನ ಸೋನಿಗೆ ಹರಸಿ ಹಾರೈಸಿದ್ದೇವೆ ಎನ್ನುವುದು ಆಪ್ತರ ಮಾತುಗಳು..

ಮಾನವೀಯತೆಯನ್ನು ಮರೆಯುತ್ತಿರುವ ಈ ಕಾಲದಲ್ಲಿ ಸಾಕುಪ್ರಾಣಿಗೆ ಅಕ್ಕರೆ, ಮಮಕಾರ ತೋರಿಸಿದ ಕುಂಬಾರ ಕುಟುಂಬದ ಕಾರ್ಯ ಶ್ಲಾಘನೀಯ.


Spread the love

Leave a Reply

Your email address will not be published. Required fields are marked *