“ನಾಯಿ” ಮತ್ತೂ ‘ಸರಕಾರಿ ನೌಕರ’- ಧಾರವಾಡದ ಡಿಸಿ ಮೇಡಂ “ಹಿಂಗ್ಯಾಕಂದ್ರು” ಗೊತ್ತಾ…!? Exclusive Video
1 min readಅಧಿಕಾರಿಗಳಿಗಳಿಗೆ ನಿಯತ್ತಿನ ನೀತಿಪಾಠ ಹೇಳಿದ ಜಿಲ್ಲಾಧಿಕಾರಿ ದಿವ್ಯಪ್ರಭು
ಉಪಲೋಕಾಯುಕ್ಯರ ಅಹವಾಲು ಸಭೆಯಲ್ಲಿ ಅಧ್ಯಕ್ಷೀಯ ಭಾಷಣ
ಧಾರವಾಡ: ನಾಯಿಯ ಕತೆಯೊಂದನ್ನು ಹೇಳಿ ಸರಕಾರಿ ಅಧಿಕಾರಿಗಳಿಗೆ ಡಿಸಿ ದಿವ್ಯ ಪ್ರಭು ಅವರು, ನಿಯತ್ತಿನ ಬಗ್ಗೆ ಪಾಠ ಮಾಡಿದ ಮೂಲಕ ಇವತ್ತಿನ ಅವಶ್ಯಕತೆಯನ್ನ ಹೇಳಿದರು.
ಇಲ್ಲಿರೋ ವೀಡಿಯೋವನ್ನ ಪೂರ್ಣವಾಗಿ ನೋಡಿದರೇ, ನಾಯಿಯ ಬಗ್ಗೆ ಗೊತ್ತಾಗತ್ತೆ..
ನಿಯತ್ತಿನ ನಾಯಿ ಹೇಗೆ ಕೆಲಸ ಮಾಡಬೇಕೋ ಹಾಗೆ ಅಧಿಕಾರಿಗಳು ಕೆಲಸ ಮಾಡಬೇಕು ಎಂಬ ಅರ್ಥದಲ್ಲಿ ಹೇಳಿದ ಡಿಸಿಯವರು, ನಾಯಿ ಎಷ್ಟೇ ನಿಯತ್ತಿನಿಂದ ಇದ್ದರೂ ಮಾಲೀಕರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು. ಒಂದೇ ಒಂದು ಸಣ್ಣ ತಪ್ಪು ಮಾಡಿದ್ರು ಸಹಿಸೋದಿಲ್ಲ. ಹಾಗೆಯೇ ನಾವು ಅಧಿಕಾರಿಗಳು, ನಮ್ಮ ಸಂಬಳಕ್ಕೆ ತಕ್ಕಂತೆ ನಿಯತ್ತಿನಿಂದ ಕೆಲಸ ಮಾಡುತ್ತೇವೆ. ಜನಸಾಮಾನ್ಯರ ವಿಚಾರಗಳು ಏನು ಇದೆ ಎಂದು ತಿಳಿದುಕ್ಕೊಳ್ಳಬೇಕು ಎಂದರು.
ಜನಪರ ಸ್ಕಿಮ್‌ಗಳನ್ನ ನಾವು ಹೇಗೆ ಇಂಪ್ಲಿಮೇಂಟ್ ಮಾಡಬೇಕು ಅನ್ನೋದನ್ನ ಕಲಿಯಬೇಕು. ನಮಗೆ ದೊಡ್ಡ ದೊಡ್ಡ ಜವಾಬ್ದಾರಿಯನ್ನ ಕೊಟ್ಟಿದ್ದಾರೆ. ನಿಷ್ಠೆಯಿಂದ, ಜವಾಬ್ದಾರಿಯಿಂದ ಕೆಲಸವನ್ನ ಮಾಡಬೇಕು. ಸರಕಾರದ ಸ್ಕೀಂಗಳನ್ನ ನಾವು ಕಟ್ಟಕಡೆಯ ಗ್ರಾಮದ ಜನರಿಗೆ ಮುಟ್ಟುವ ಹಾಗೆ ಮಾಡಬೇಕು. ಅದಕ್ಕೆ ನಾವು ಜನರ ಸೇವೆಯನ್ನ ನಾವು ಮಾಡಬೇಕು ಎಂದರು.
ಸರಕಾರ ಸಾಕಷ್ಟು ಸವಲತ್ತುಗಳನ್ನ ನಮಗೆ ಕೊಟ್ಟಿದೆ. ಅದಕ್ಕೆ, ನಾವು ಜನರ ಸೇವೆಯನ್ನ ನೀಟಾಗಿ ಮಾಡಬೇಕು. ನಮ್ಮ ಮಾಲೀಕರಾದ ಜನರ ನೀರೀಕ್ಷೆಯಂತೆ ಇರಬೇಕೆಂದು ವಿವಿಧ ಇಲಾಖೆಯ ಅಧಿಕಾರಿಗಳಿಗೆ ನೀತಿ ಪಾಠ ಮಾಡಿದರು.