ಧಾರವಾಡದಲ್ಲಿ ವೈದ್ಯ ದಂಪತಿಗಳಿಂದ ವೃದ್ಧೆ ಮೇಲೆ ಹಲ್ಲೆ- ಆಸ್ತಿಗಾಗಿ ತಾಯಿಯನ್ನೇ ಹೊಡೆದ ಮಗಳು…!

ಧಾರವಾಡ: ಹಣದ ಆಸೆಗಾಗಿ ತಾಯಿ ವಾಸವಿದ್ದ ಮನೆಯನ್ನ ಲಪಟಾಯಿಸಲು ಮುಂದಾಗಿದ್ದ ಮಗಳು-ಅಳಿಯ, ವೃದ್ಧ ತಾಯಿಯನ್ನ ಹಿಗ್ಗಾ-ಮುಗ್ಗಾ ಥಳಿಸಿದ ಘಟನೆ ಧಾರವಾಡದ ಬಾಗಲಕೋಟೆ ಪೆಟ್ರೋಲ್ ಪಂಪ್ ಸಮೀಪದ ಮನೆಯೊಂದರಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಧಾರವಾಡದ ಆರ್ಯ ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆಯ ಹಿಂಭಾಗದಲ್ಲಿ ವಾಸವಾಗಿದ್ದ ಸುಮಾ ತಡಕೋಡ ಅವರನ್ನ ಸ್ವಂತ ಮಗಳಾದ ಅನುಪಮಾ ಹಾಗೂ ಈಕೆಯ ಗಂಡ ಶ್ರೀಹರ್ಷ ಮನೆ ಖಾಲಿ ಮಾಡುವಂತೆ ಒತ್ತಾಯಿಸಿ, ಹಿಗ್ಗಾ-ಮುಗ್ಗಾ ಥಳಿಸಿದ್ದಾರೆಂದು ದೂರು ದಾಖಲಾಗಿದೆ.

ವೈಧ್ಯ ದಂಪತಿಗಳಿಬ್ಬರು ಈಗಾಗಲೇ ಆಸ್ಪತ್ರೆಯಲ್ಲಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಹೆಚ್ಚುವರಿ ಬೆಡ್ ಹಾಕುವ ಉದ್ದೇಶದಿಂದ, ತಾಯಿಯನ್ನೇ ಹೊರಗೆ ಹಾಕುವ ಪ್ರಯತ್ನಕ್ಕೆ ಇಳಿದಿದ್ದಾರೆಂದು ಹೇಳಲಾಗಿದೆ.

ಧಾರವಾಡದಲ್ಲಿ ಸುಶಿಕ್ಷಿತ ಮನೆತನದ ವೈದ್ಯರು ಹಣಕ್ಕಾಗಿ ಹೀಗೆ ಮಾಡಿದ್ದು, ಸೋಜಿಗ ಮೂಡಿಸಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ವಿದ್ಯಾಗಿರಿ ಠಾಣೆ ಪೊಲೀಸರು ಮುಂದಿನ ಕಾನೂನು ಕ್ರಮವನ್ನ ತೆಗೆದುಕೊಂಡಿದ್ದು, ವೈದ್ಯ ದಂಪತಿಗಳನ್ನ ಇನ್ನೂ ಬಂಧನ ಮಾಡಬೇಕಿದೆ.