ಕೊರೋನಾಗೆ 196 ವೈದ್ಯರು ಬಲಿ: ಗುಜರಾತ-23, ಕರ್ನಾಟಕ-15 ಡಾಕ್ಟರ್ಸ್ ಮರಣ
1 min readನವದೆಹಲಿ: ಇದು ನಿಜವಾಗಲೂ ಆತಂಕಪಡುವ ವಿಚಾರ. ಯಾರೂ ಮನುಷ್ಯನ ಪಾಲಿಗೆ ಜೀವಂತ ದೇವರಾಗಿ ಕಾಣುತ್ತಿದ್ದಾರೋ ಅವರಲ್ಲಿಯೇ 196 ಜನರು ಅದೇ ರೋಗಕ್ಕೆ ಬಲಿಯಾಗಿರುವುದು ತೀವ್ರ ನೋವಿನ ಸಂಗತಿಯಾಗಿದೆ.
ಕೊರೋನಾ ವೈರಸ್ ಹರಡಲು ಆರಂಭಿಸಿದಾಗಿನಿಂದಲೂ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ವೈಧ್ಯರು ತಮ್ಮ ಜೀವನದ ಹಂಗು ತೊರೆದು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಕೋವಿಡ್-19 ತಡೆಯಲು ಹೋಗಿ ಅದಕ್ಕೆ ತುತ್ತಾದ ವೈಧ್ಯರ ಮಾಹಿತಿಯನ್ನ ಐಎಂಎ ಹೊರಗೆ ಹಾಕಿದ್ದು ದೇಶದಲ್ಲಿ ಒಟ್ಟು 196 ವೈಧ್ಯರು ಇದೇ ರೋಗದಿಂದ ಮರಣವನ್ನಪ್ಪಿದ್ದಾರೆ.
ದೇಶದ 18 ರಾಜ್ಯಗಳಲ್ಲಿ ವೈದ್ಯರು ತೀರಿಕೊಂಡಿದ್ದು, ಮೊದಲ ಸ್ಥಾನದಲ್ಲಿ ತಮಿಳುನಾಡು 43 ವೈದ್ಯರನ್ನ ಕಳೆದುಕೊಂಡಿದ್ದರೇ ಎರಡನೇಯ ಸ್ಥಾನದಲ್ಲಿ ಗುಜರಾತ ಮತ್ತು ಮಹಾರಾಷ್ಟ್ರದಲ್ಲಿ ತಲಾ 23 ವೈಧ್ಯರು ತೀರಿಕೊಂಡಿದ್ದಾರೆ. ಕರ್ನಾಟಕದಲ್ಲಿ 15 ವೈದ್ಯರು ಕೊರೋನಾಗೆ ಬಲಿಯಾಗಿದ್ದಾರೆ.