ಡಾಕ್ಟರ್ “ಆ ವೀಡಿಯೋ” ಪ್ರಸಾರ ಮಾಡದಂತೆ ತಡೆಯಾಜ್ಞೆ… Blackmail ಮಾಡಿದವರ ಬಗ್ಗೆ “ದೂರಿಲ್ಲ”….

ಧಾರವಾಡ: ತಮ್ಮ ವಿರುದ್ಧವಿರುವ “ಆ” ವೀಡಿಯೋವನ್ನ ಪ್ರಸಾರ ಮಾಡದಂತೆಯೂ ಹಾಕಿರುವ ವೀಡಿಯೋವನ್ನ ಡಿಲೀಟ್ ಮಾಡುವಂತೆಯೂ ಡಾಕ್ಟರ್ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆಂದು ತಿಳಿದು ಬಂದಿದೆ.
ಡೀಲ್ ಮಾಡಲು ಬಂದವರ ಬಗ್ಗೆ ಇಲ್ಲಿಯವರೆಗೆ ಯಾವುದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲವಾದರೂ, ವೀಡಿಯೋ ರಿಲೀಸ್ ಆಗದಂತೆ ತಡೆಯಾಜ್ಞೆ ತರುವಲ್ಲಿ ಅವರು ಯಶಸ್ವಿಯಾಗಿದ್ದಾರೆ.
ಅಖಂಡ ಧಾರವಾಡ ಜಿಲ್ಲೆಯಲ್ಲಿ ವೈರಲ್ ಆಗಿದ್ದ ವೀಡಿಯೋವನ್ನ ಲಕ್ಷಾಂತರ ವೀಕ್ಷಕರು ನೋಡಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.