ಕೊರೋನಾ ಸಮಯದಲ್ಲಿ ಮತ್ತೋಬ್ಬ ವೈಧ್ಯ ಆತ್ಮಹತ್ಯೆ: ಬಾತ್ ರೂಂ ಗ್ರೀಲ್ಲಿಗೆ ನೇಣು..
ಹಾವೇರಿ: ನಂಜನಗೂಡು ತಾಲ್ಲೂಕು ವೈದ್ಯಾಧಿಕಾರಿ ಆತ್ಮಹತ್ಯೆ ಸುದ್ದಿ ಇಡೀ ಚರ್ಚೆಯಲ್ಲೇ ಇರುವಾಗಲ್ಲೇ ರಾಜ್ಯದಲ್ಲಿ ಮತ್ತೊಬ್ಬ ವೈದ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಹಾವೇರಿಯ ಬಸವೇಶ್ವರ ನಗರದ ಡಾ. ಜಗದೀಶ್ ಗೊಡ್ಡೆಮ್ಮಿ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಕಿವಿ, ಮೂಗು, ಗಂಟಲು ತಜ್ಞರಾಗಿದ್ದ ಡಾ.ಜಗದೀಶ, ಸಾಕಷ್ಟು ಜನರ ಆರೋಗ್ಯವನ್ನ ಸುಧಾರಿಸಿದ್ದರು.
ಆಸ್ಪತ್ರೆಗೆ ಬಂದ ರೋಗಿಗಳೊಂದಿಗೆ ಉತ್ತಮವಾಗಿ ಸ್ಪಂದನೆ ಮಾಡುತ್ತಿದ್ದ, ಆತ್ಮಹತ್ಯೆ ಏಕೆ ಮಾಡಿಕೊಂಡರು ಎಂಬುದರ ಬಗ್ಗೆ ಖಚಿತವಾಗಿ ಮಾಹಿತಿ ದೊರಕಿಲ್ಲ. ತಮ್ಮದೇ ಬೆಡ್ ರೂಮ್ ದಲ್ಲಿನ ಬಾತ್ ರೂಂನ ಕಿಟಕಿಯ ಗ್ರೀಲ್ ಗೆ ನೈಲಾನ್ ಹಗ್ಗದಿಂದ ನೇಣು ಹಾಕಿಕೊಂಡಿದ್ದಾರೆ.
ಹಾವೇರಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹೆಚ್ಚಿನ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.

