ಬೈರಪ್ಪ-ಕಣವಿ-ಸಾಲುಮರದ ತಿಮ್ಮಕ್ಕರಿಗೆ ಗೌರವ ಡಾಕ್ಟರೇಟ್: ನಾಳೆ ಕಲಬುರಗಿಯಲ್ಲಿ ಪ್ರಧಾನ
ಕಲಬುರಗಿ: ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಲು ಹೆಸರು ಪ್ರಕಟಿಸಿದ್ದು, ಐದು ಜನರಿಗೆ ನಾಳೆ ಪದವಿಯನ್ನ ಪ್ರಧಾನ ಮಾಡಲಿದೆ.
ಜಾನಪದ ವಿದ್ವಾಂಸ ಎಂ.ಜಿ.ಬಿರಾದಾರ, ಕನ್ನಡ ಕಾದಂಬರಿಕಾರ ಎಸ್.ಎಲ್.ಬೈರಪ್ಪ, ಕನ್ನಡದ ಕವಿ ಚೆನ್ನವೀರ ಕಣವಿ, ಪರಿಸರವಾದಿ ಮತ್ತು ಸಮಾಜಸೇವಕಿ ಸಾಲುಮರದ ತಿಮ್ಮಕ್ಕ, ಬಾಹ್ಯಾಕಾಶ ವಿಜ್ಞಾನಿ ಕೆ.ಶಿವನ್ ಅವರಿಗೆ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಿದೆ.
ನಾಳೆ ಕಲಬುರಗಿಯ ಸಿಯುಕೆಯ ವಿವಿಧೋದ್ದೇಶ ಸಭಾಭವನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ನವದೆಹಲಿ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಚೇರಮನ್ನ ಪ್ರೋಪೆಸರ್ ಡಿ.ಪಿ.ಸಿಂಗ್ ಭಾಗವಹಿಸಲಿದ್ದಾರೆ.
ನಾಳೆ ನಡೆಯಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವ ಕಾರ್ಯಕ್ರಮವಾಗಿದ್ದು, ಕಲ್ಯಾಣ ಕರ್ನಾಟಕದಲ್ಲಿ ಸಾಲುಮರದ ತಿಮ್ಮಕ್ಕರಿಗೆ ಗೌರವ ಸಿಗುತ್ತಿರುವುದು ಹೆಮ್ಮೆಯ ವಿಷಯ.