ಜೆಡಿಎಸ್ ಬೆಂಬಲದ ಬಗ್ಗೆ ನಾನೂ ನಿರ್ಧಾರ ಮಾಡೋದಿಲ್ಲವೆಂದ ಡಿ.ಕೆ.ಶಿವುಕುಮಾರ
ಬೆಂಗಳೂರು: ನಮ್ಮ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆಯವರು ಮಾತ್ರ. ಜೆಡಿಎಸ್ ಬೆಂಬಲದ ಬಗ್ಗೆ ರಾಷ್ಟ್ರೀಯ ನಾಯಕರು ನಿರ್ಧರಿಸ್ತಾರೆ. ನಾವು ಬಿಜೆಪಿಯನ್ನೇನು ಬೆಂಬಲಿಸೋಕೆ ಆಗುತ್ತಾ. ಜಾತ್ಯಾತೀತ ನಿಲುವನ್ನೇ ಬೆಂಬಲಿಸಬೇಕು ಎನ್ನುವ ಮೂಲಕ ಜೆಡಿಎಸ್ ಬೆಂಬಲದ ಬಗ್ಗೆ ಡಿಕೆಶಿ ಪರೋಕ್ಷವಾಗಿ ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಕೆ ಸಮಯದಲ್ಲಿ ಕಾರ್ಯಕರ್ತರು ಬರದಂತೆ ನಾವು ಮನವಿ ಮಾಡಿದ್ದೇವೆ. ಬಂದರೂ ವಿಧಾನಸೌಧದಲ್ಲಿ ಅವಕಾಶವಿಲ್ಲ. ಮೊದಲು ನಮ್ಮಪಕ್ಷದ ಕಚೇರಿಯಲ್ಲಿ ಶಾಸಕರ ಸಭೆ ಇದೆ. ಸಭೆಯ ಬಳಿಕ ನಾವು ನಾಮಪತ್ರ ಸಲ್ಲಿಸ್ತೇವೆ. ಕೆಲವೇ ನಾಯಕರು ಭಾಗವಹಿಸ್ತೇವೆ. ರಿಸಲ್ಟ್ ಬಂದ ನಂತರ ಎಲ್ಲರೂ ಸೆಲಬರೇಟ್ ಮಾಡ್ತೇವೆ ಎಂದರು.
ಜನತೆ ಎಚ್ಚರಿಕೆಯಿಂದ ನಡೆದುಕೊಳ್ಳಿ: ಮಾರ್ಗಸೂಚಿ ಪಾಲಿಸಿ
ನಾಳೆಯಿಂದ ಲಾಕ್ ಡೌನ್ ಸಡಿಲಿಕೆ ವಿಚಾರವಾಗಿ ರಾಜ್ಯದ ಜನತೆ ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು. ನಾನು ಅಧಿಕಾರ ಸ್ವೀಕರಿಸಬೇಕು. ನಾಳೆಯಿಂದ ಲಾಕ್ ಡೌನ್ ಸಡಿಲಿಕೆಯಾಗಬಹುದು. ಜನಸಾಮಾನ್ಯರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವುಕುಮಾರ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆಶಿ, ಯಾರೂ ಅಲಕ್ಷ್ಯ ತೋರಿಸುವುದು ಬೇಡ. ಹೊಟೇಲ್, ಮಾಲ್, ದೇಗುಲ ಓಪನ್ ವಿಚಾರದಲ್ಲೂ ಜನ ಜಾಗರೂಕರಾಗಿದ್ದಾರೆ. ಮತ್ತಷ್ಟು ಜಾಗರೂಕರಾಗಬೇಕು. ನಾವೆಲ್ಲರೂ ಒಟ್ಟಾಗಿ ಪಾಲಿಸಬೇಕು ಎಂದು ಹೇಳಿದರು.
ಜೂನ್ 14 ರಂದು ಪದಗ್ರಹಣ ಕಾರ್ಯಕ್ರಮ
ಕಾರ್ಯಕ್ರಮಕ್ಕೆ ಸಿಎಂ ಬಳಿ ಅನುಮತಿ ಕೇಳಿದ್ದೇನೆ. ಅನುಮತಿ ಕೊಟ್ಟರೆ ಸರಳವಾಗಿ ಕಾರ್ಯಕ್ರಮ. ಅರಮನೆ ಮೈದಾನದಲ್ಲಿ ನಾವು ಕಾರ್ಯಕ್ರಮ ಮಾಡಲ್ಲ. ಕೇವಲ 150 ಮಂದಿ ಸೇರಿ ಕಾರ್ಯಕ್ರಮ ಮಾಡ್ತೇವೆ. ಉಳಿದಂತೆ ಗ್ರಾಮ ಪಂಚಾಯ್ತಿಗಳಲ್ಲೇ ಕಾರ್ಯಕ್ರಮ. ಹೀಗಾಗಿ ಕಾರ್ಯಕರ್ತರು ಯಾರು ಇಲ್ಲಿಗೆ ಬರಬಾರದು. ಕೇವಲ ಶಾಸಕರು, ಗಣ್ಯರಿಗೆ ಮಾತ್ರ ಅವಕಾಶ. ಅವರಿಗೆ ಪಾಸ್ ವ್ಯವಸ್ಥೆ ಮಾಡ್ತೇವೆ ಎಂದು ಹೇಳಿದರು.