ಬಿಜೆಪಿಗೆ ಅಧಿಕಾರ ನಡೆಸುವ ಯೋಗ್ಯತೆಯಿಲ್ಲ: ಡಿ.ಕೆ.ಶಿವುಕುಮಾರ ಟಾಂಗ್
1 min readಬೆಂಗಳೂರು: ವಿಧಾನಸೌಧದ ಮುಂದೆ ಗಾಂಧಿ ಪ್ರತಿಮೆ ಮುಂದೆ ಅನಿವಾರ್ಯವಾಗಿ ನಾವು ಪ್ರತಿಭಟನೆ ಮಾಡಬೇಕಿದೆ. ರಾಜ್ಯಾಧ್ಯಂತ ನಂತರ ಪ್ರತಿಭಟನೆ ಮಾಡುತ್ತೇವೆ. ನಿನ್ನೆ ನಾವು ಶಾಸಕರು ಶಾಸಕಾಂಗ ಸಭೆಯನ್ನು ನಾವು ಪ್ರತಿ ಬಾರಿ ನಾವು ಅಲ್ಲೇ ಮಾಡುವುದು. ಅದಕ್ಕೆ ಅವಕಾಶ ಮಾಡಲಿಲ್ಲ. ಪ್ರಧಾನಿ ೨೦ ಲಕ್ಷ ಕೋಟಿ ಆರ್ಥಿಕ ನೆರವು ಅಂತ ಹೇಳಿದ್ರು. ಇದು ಬೋಗಸ್ ಅಂತ ಆರ್ಥಿಕ ಚಿಂತಕರು ಹೇಳುತ್ತಿದ್ದಾರೆ ಎಂದು ಡಿ.ಕೆ.ಶಿವುಕುಮಾರ ಆರೋಪಿಸಿದರು.
ವಿಧಾನಸೌಧದ ಬಳಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಮಾತನಾಡಿದ ಶಿವುಕುಮಾರ, ಯಡಿಯೂರಪ್ಪ ಅವರು ಹಣ ಘೋಷಣೆ ಮಾಡಿದ್ರು. ಇದನ್ನು ಜನರಿಗೆ ತಲುಪಿಸಲು ಆಗಿಲ್ಲ. ಜನರು ಅವರ ಬಳಿಯಿರುವ ಆಸ್ತಿ ಅಡವಿಟ್ಟು ಹಣ ತೆಗೆದುಕೊಳ್ಳಿ ಎಂದು ಹೇಳುವುದಕ್ಕೆ ಇವರೇ ಬೇಕಾ ಎಂದು ಟೀಕಿಸಿದರು.
ಕಟ್ಟಡ ಸೇರಿ ಎಲ್ಲಾ ರೀತಿಯಲ್ಲಿ ಕಾರ್ಮಿಕರು ಕಷ್ಟದಲ್ಲಿದ್ದಾರೆ. ಪಂಚಾಯತಿ ಚುನಾವಣೆ ಮಾಡಲ್ಲ ಅಂತಿದ್ದಾರೆ. ಅವರ ಪಕ್ಷದ ಸದಸ್ಯರನ್ನು ನೇಮಕ ಮಾಡುವುದಕ್ಕೆ ಹುನ್ನಾರ ಮಾಡುತ್ತಿದ್ದಾರೆ. ಯಡಿಯೂರಪ್ಪನವರೇ ನಿಮ್ಮ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ಎಪಿ ಎಂ ಸಿ ಕಾಯ್ದೆ ವಾಪಸ್ ತೆಗೆದುಕೊಳ್ಳಬೇಕು. ರಾಜ್ಯದಲ್ಲಿ ಕಾರ್ಮಿಕರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಕಾರ್ಮಿಕ ಇಲಾಖೆಯಲ್ಲಿ ಕೆಲವರಿಗೆ ಮಾತ್ರ ಪ್ಯಾಕೇಜ್ ಸಿಕ್ಕಿದೆ. ನಿಮ್ಮಗೆ ಈ ಅಧಿಕಾರ ನಡೆಸುವುದಕ್ಕೆ ಅರ್ಹತೆ ಇಲ್ಲ, ಯೋಗ್ಯತೆ ಇಲ್ಲ. ಕೆ ಇ ಬಿ ನಲ್ಲಿ ನಿಮಗೆ ಇಷ್ಟ ಬಂದ ಹಾಗೆ ಬಿಲ್ ಹಾಕುತ್ತಿದ್ದೀರಾ. ಅಂಗಡಿ-ವ್ಯಾಪಾರಗಳನ್ನು ಮುಚ್ಚಿಸಿ ಬಡ್ಡಿ ಕಟ್ಟಿ ಅನ್ನುತ್ತಿರ. ಬಡ್ಡಿ ಮನ್ನಾ ಮಾಡಲಿಲ್ಲ ಅಂದ್ರೆ ಈ ಸರ್ಕಾರಕ್ಕೆ ಭವಿಷ್ಯ ಇಲ್ಲ ಎಂದರು.