ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷನ ಸೆಕ್ಸ್ ಪೋಸ್ಟ್- ಮೀಡಿಯಾ ಗ್ರೂಫಲ್ಲೇ ಆವಾಂತರ
ವಿಜಯಪುರ: ಮಾಜಿ ಸಚಿವ ಮುರುಗೇಶ ನಿರಾಣಿ ವಾಟ್ಸಾಫ್ ಪ್ರಕರಣ ಇನ್ನೂ ಹಚ್ಚ ಹಸಿರಿರುವಾಗಲೇ ಕಾಂಗ್ರೆಸ ಮಾಜಿ ಜಿಲ್ಲಾಧ್ಯಕ್ಷರು ವಾಟ್ಸಾಫ್ ಯಡವಟ್ಟು ಮಾಡಿಕೊಂಡಿದ್ದು, ಅವರ ಅಭಿರುಚಿ ಎಂತಹದು ಎಂಬುದನ್ನ ತೋರಿಸಿಕೊಟ್ಟಿದ್ದಾರೆ.
ವಿಜಯಪುರ ಡಿಸಿಸಿ (ಮೀಡಿಯಾ ಮತ್ತು ಟಿವಿ) ಎಂಬ ಗ್ರೂಫ್‌ನಲ್ಲಿರೋ ರವಿಗೌಡ ಪಾಟೀಲ, ಅಶ್ಲೀಲವಾದ ಪೋಸ್ಟ್ ಹಾಕಿದ್ದಾರೆ. ಓರ್ವ ಗಂಡಸು, ಇನ್ನೋರ್ವ ಹೆಂಗಸಿನ ಜೊತೆ ಬೆತ್ತಲಾಗಿರುವ ಪೋಸ್ಟ್ ಇದಾಗಿದ್ದು, ಅಧ್ಯಕ್ಷರ ಮೊಬೈಲ್‌ನಿಂದಲೇ ಬಂದಿದೆ.
ಕಾಂಗ್ರೆಸ್ ಪಕ್ಷದ ಬಹುತೇಕ ಮುಖಂಡರು ಬಂದಾಗ ಪೋಟೋ ತೆಗೆಸಿಕೊಳ್ಳುವ ಖಯಾಲಿ ಹೊಂದಿರುವ ರವಿಗೌಡ ಪಾಟೀಲ, ಇಂತಹ ಕೀಳು ಅಭಿರುಚಿಯನ್ನ ಹೊಂದಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.
ಸಾರ್ವಜನಿಕ ವಲಯದಲ್ಲಿರುವ ನಾಯಕರು ಹೀಗೇಕೆ ಎಂಬ ಪ್ರಶ್ನೆ ಮೂಡಿದ್ದು, ಘನವೆತ್ತ ಪಾಟೀಲರೇ ಇದ್ಕೆ ಉತ್ತರ ಕೊಡಬೇಕಿದೆ.