ಜಿಲ್ಲೆಯಲ್ಲಿ ಒಂದೇ ದಿನ 375 ಕೇಸ್: ನಾಲ್ಕು ಸಾವು
1 min readಬಳ್ಳಾರಿ: ಇಂದು ಒಂದೇ ದಿನ 375 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ನಾಲ್ಕು ಜನ ಸೋಂಕಿತರು ಮೃತಪಟ್ಟ ಬಗ್ಗೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ ಮಾಹಿತಿ ನೀಡಿದ್ದಾರೆ.
ಬಳ್ಳಾರಿ ನಗರದಲ್ಲೇ 172, ಸೊಂಡೂರ 32, ಹೊಸಪೇಟೆ 87, ಸಿರಗುಪ್ಪ 08, ಕೂಡ್ಲಗಿ 16, ಹಡಗಲಿ 18, ಹಗರಿಬೊಮ್ಮನಹಳ್ಳಿ 28, ಹರಪನಹಳ್ಳಿ 12 ಇತರೆ ಎರಡು ಪ್ರಕರಣಗಳು ಪತ್ತೆಯಾಗಿವೆ.
ಜಿಲ್ಲೆಯಲ್ಲಿ 6957 ಪ್ರಕರಣಗಳು ಪತ್ತೆಯಾಗಿದ್ದು, 101 ಜನ ಸೋಂಕಿತರು ಇಲ್ಲಿಯವರೆಗೆ ತೀರಿಕೊಂಡಿದ್ದಾರೆ.