ಮೂರುಸಾವಿರ ಮಠದ ಆಸ್ತಿಯಲ್ಲೇಕೆ ಕೆಎಲ್ಇ ಮೆಡಿಕಲ್ ಕಾಲೇಜ್: ಶ್ರೀ ದಿಂಗಾಲೇಶ್ವರ ಶ್ರೀಗಳ ಪ್ರಶ್ನೆ
1 min readಹುಬ್ಬಳ್ಳಿ: ಕರ್ನಾಟಕ ಲಿಂಗಾಯತ ಸೊಸಾಯಿಟಿಯು ಮೂರುಸಾವಿರ ಮಠದ ಆಸ್ತಿಯಲ್ಲಿ ಯಾವುದೇ ಕಾರಣಕ್ಕೂ ವೈಧ್ಯಕೀಯ ಮೆಡಿಕಲ್ ಕಾಲೇಜನ್ನ ನಿರ್ಮಾಣ ಮಾಡಬಾರದೆಂದು ಬಾಲೆಹೊಸೂರಿನ ಶ್ರೀಗಳು ಹಾಗೂ ಮೂರುಸಾವಿರ ಮಠದ ಉತ್ತರಾಧಿಕಾರಿ ಶ್ರೀ ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದರು.
ಹುಬ್ಬಳ್ಳಿಯ ಮೂರುಸಾವಿರ ಮಠದ ಆಸ್ತಿಯಲ್ಲಿ ಮೆಡಿಕಲ್ ಕಾಲೇಜ್ ಮಾಡುವುದನ್ನ ನಿಲ್ಲಿಸಬೇಕು. ಹಲವು ಕಾನೂನು ತೊಡಕು ಇರುವುದರಿಂದ ಭೂಮಿ ಪೂಜೆಯನ್ನ ಮಾಡುವುದನ್ನ ನಿಲ್ಲಿಸಬೇಕು ಎಂದು ಹುಬ್ಬಳ್ಳಿಯಲ್ಲಿ ಹೇಳಿದರು.
ಮೂರುಸಾವಿರ ಮಠದ ಆಸ್ತಿಯಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡುವುದಾದರೇ, ಮೂರುಸಾವಿರ ಮಠದ ಆಡಳಿತ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡುವುದಾದರೇ, ಅದಕ್ಕೆ ನನ್ನ ಅಭ್ಯಂತರವಿಲ್ಲ. ನಾನು ಇರುವವರೆಗೂ ಆಸ್ತಿಯನ್ನ ಕಳೆದು ಹೋಗುವಂತೆ ಮಾಡಲು ಬಿಡುವುದಿಲ್ಲವೆಂದು ಹೇಳಿದರು.
ಮೂರುಸಾವಿರ ಮಠದ ಆಸ್ತಿಯನ್ನ ಯಾರೂ ಹೊಡೆಯಲು ಬಿಡುವುದಿಲ್ಲ. ಮಠದ ಆಸ್ತಿಯನ್ನ ಕಬಳಿಕೆ ಮಾಡಲು ಬಿಡುವುದಿಲ್ಲ. ನನ್ನ ಗುರಿ ಮೂರುಸಾವಿರ ಮಠದ ರಕ್ಷಣೆ. ನನಗೆ ಯಾವುದೇ ದುರುದ್ದೇಶವಿಲ್ಲ. ನಾನು ಮೆಡಿಕಲ್ ಕಾಲೇಜ್ ನಿರ್ಮಾಣ ಮಾಡುವುದಕ್ಕೆ ವಿರೋಧವಿಲ್ಲ. ಮಠದ ಆಸ್ತಿಯನ್ನ ಉಳಿಸುವುದು ಮುಖ್ಯ. ಕೊಲ್ಕೊತ್ತಾ ನ್ಯಾಯಾಲಯದಲ್ಲಿ ಆದೇಶವೊಂದು ಇದೆ. ಮಠದ ಆಸ್ತಿಯನ್ನ ಪರಭಾರೆ ಮಾಡಬಾರದೆಂದು ಆದೇಶದಲ್ಲಿದೆ ಎಂದರು.
ಮೂರುಸಾವಿರ ಮಠದ ಹಾಲಿ ಶ್ರೀಗಳ ಸೌಮ್ಯತೆಯನ್ನ ಬಳಕೆ ಮಾಡಿಕೊಂಡು ಆಸ್ತಿಯನ್ನ ಕಬಳಿಕೆ ಮಾಡಿಕೊಂಡಿದ್ದಾರೆ. ಕೆಎಲ್ಇ ಸಂಸ್ಥೆಯು 24.33 ಎಕರೆ ಭೂಮಿಯನ್ನ ದಾನ ಎಂದು ಹೇಳಿಕೊಂಡಿದೆ. ಆದರೆ, ಅದು ಕಾನೂನಿನ ವ್ಯಾಪ್ತಿಯಲ್ಲಿ ಬರುವುದಿಲ್ಲ. ಇಷ್ಟು ಹೇಳಿದ ಮೇಲೂ ಭೂಮಿ ಪೂಜೆ ಮಾಡಿದರೇ, ಹೋರಾಟದ ರೂಪುರೇಷೆ ರಚನೆ ಮಾಡಲಾಗುವುದು ಎಂದು ಶ್ರೀಗಳು ಹೇಳಿದರು.
ಕೆಎಲ್ಇ ಸಂಸ್ಥೆಗೆ ಮೂರುಸಾವಿರ ಮಠ ಈಗಾಗಲೇ ಹಲವು ಆಸ್ತಿಗಳನ್ನ ಕೊಟ್ಟಿದೆ. ಅದರಲ್ಲಿ ಹಲವು ಕಾಲೇಜುಗಳನ್ನ ನಿರ್ಮಾಣ ಮಾಡಿದೆ. ಹುಬ್ಬಳ್ಳಿಯಲ್ಲಿ ಕೆಎಲ್ಇ ಮೆಡಿಕಲ್ ಕಾಲೇಜ್ ಮಾಡಲಿ, ಆದರೆ, ಮೂರುಸಾವಿರ ಮಠದ ಆಸ್ತಿಯಲ್ಲಿ ಬೇಡಾ ಎನ್ನುವುದನ್ನ ಖಡಾಖಂಡಿತವಾಗಿ ಶ್ರೀಗಳು ಖಂಡಿಸಿದರು.