ಧೋನಿಯಷ್ಟೇ ಅಲ್ಲ, ರೈನಾ ಕೂಡಾ ಕ್ರಿಕೆಟ್ ಗೆ ವಿದಾಯ: ಗೆಳೆಯನ ಜೊತೆನೇ ಹೆಜ್ಜೆ ಹಾಕಿದ್ದೇಕೆ..?
ನವದೆಹಲಿ: ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ವಿದಾಯ ಹೇಳಿದ್ದು, ಇದನ್ನ ನೋಡಿ ಕೆಲವೇ ಗಂಟೆಗಳಲ್ಲಿ ಸುರೇಶ ರೈನಾ ಕೂಡಾ ಕ್ರಿಕೆಟ್ ಗೆ ವಿದಾಯ ಹೇಳುವುದಾಗಿ ಟ್ವಟ್ ಮಾಡಿದ್ದಾರೆ.
ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂಎಸ್ ಧೋನಿ ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ಟ್ ನಿಂದ ದೂರ ಉಳಿದಿದ್ದರು. ವಿವಿಧ ಚಟುವಟಿಕೆಗಳ ಮೂಲಕ ರಜೆ ದಿನಗಳನ್ನು ಕಳೆಯುತ್ತಿದ್ದ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕೊನೆಗೂ ವಿದಾಯ ಹೇಳಿದ್ದಾರೆ.
ಭಾರತಕ್ಕೆ ಎರಡು ವಿಶ್ವಕಪ್ ತಂದುಕೊಟ್ಟ ಯಶಸ್ವಿ ನಾಯಕ ಧೋನಿ, ಐಪಿಎಲ್ ನಲ್ಲಿ ನಾಯಕನಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಹಾಗೇ ಐಪಿಎಲ್ ನಲ್ಲೂ ಸಾಕಷ್ಟು ಬಾರಿ ಪ್ರಶಸ್ತಿಗಳಿಸಿದ್ದರು.
ಮಹೇಂದ್ರ ಸಿಂಗ್ ಧೋನಿ 90 ಟೆಸ್ಟ್ ಭಾರತದ ಪರ ಆಡಿದ್ರೂ.ಹಾಗೇ 350 ಒಂದು ದಿನದ ಪಂದ್ಯಗಳನ್ನು ಆಡಿದ್ದರು.ಅಲ್ಲದೇ 98 ಟ್ವೆಂಟಿ ಟ್ವೆಂಟಿ ಪಂದ್ಯ ಆಡಿದ್ದರು. ಏಕದಿನದ ಪಂದ್ಯದಲ್ಲಿ 10776 ರನ್ ಗಳಿಸಿದ್ದ ಧೋನಿ..ಧೋನಿ ಕ್ಯಾಪ್ಟನ್ ಆದಾಗ ಸಾಕಷ್ಟು ಮಂದಿ ಯಂಗ್ ಸ್ಟರ್ ಗಳಿಗೆ ಅವಕಾಶ ನೀಡಿದ್ದರು.. ಇಡೀ ವಿಶ್ವದಾದ್ಯಂತ ಧೋನಿ ಫ್ಯಾನ್ ಗಳಿದ್ದಾರೆ..
ಧೋನಿ ವಿದಾಯ ಹೇಳಿದ ಕೆಲವೇ ಗಂಟೆಗಳಲ್ಲಿ ಸುರೇಶ ರೈನಾ ಕೂಡಾ ಟ್ವೀಟ್ ಮಾಡಿದ್ದು, ನಿಂಜೊತೆ ಇರಲು ನಿರ್ಧರಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.