ಕೋವಿಡ್ ನಿರ್ವಹಣೆಯಲ್ಲಿ ನಿರ್ಲಕ್ಷ್ಯ- ಡಿಎಚ್ಓಗೆ ಕಡ್ಡಾಯ ರಜೆ…!

ವಿಜಯಪುರ: ಕೊರೋನಾ ಪ್ರಕರಣಗಳನ್ನ ನಿಭಾಯಿಸುವಲ್ಲಿ ಎಡವಿದ ಪರಿಣಾಮ ಜಿಲ್ಲಾ ಆರೋಗ್ಯಾಧಿಕಾರಿಯನ್ನ ಕಡ್ಡಾಯ ರಜೆಗೆ ಕಳಿಸಲು ಸರಕಾರದ ಆದೇಶ ಹೊರಡಿಸಿದೆ.

ಕೊರೋನಾ ಕುರಿತು ನಿರ್ಲಕ್ಷ್ಯ ವಹಿಸಿದ ಜಿಲ್ಲಾ ರಾಜಕುಮಾರ್ ಯರಗಲ್ ಅವರನ್ನೇ ಕಡ್ಡಾಯ ರಜೆ ಕಳಿಸಲು ಸರಕಾರ ಆದೇಶ ಹೊರಡಿಸಲಾಗಿದೆ. 4 ಬಾರಿ ಶೋಕಾಸ್ ನೋಟಿಸ್ ನೀಡಿ ಜಿಲ್ಲಾಧಿಕಾರಿ ಪಿ ಸುನೀಲ್ ಕುಮಾರ್ ಎಚ್ಚರಿಕೆ ನೀಡಿದ್ದರೂ, ಡಿಎಚ್ಓ ಸುಧಾರಣೆ ಕಂಡು ಬಂದಿರಲಿಲ್ಲ.
ಕೋವಿಡ್ ನಿಯಂತ್ರಣ ಮಾಡಿ ಅಂದ್ರೆ ಸಂಬಂಧವೇ ಇಲ್ಲದಂತೆ ವರ್ತಿಸಿದ್ದರಿಂದ ಅಧಿಕಾರಿಗೆ ಸರ್ಕಾರ ಚಾಟಿ ಏಟು ನೀಡಿದೆ. ಇವರ ಹುದ್ದೆಗೆ ಡಾ.ಮಹೇಂದ್ರ ಕಾಪಸೆಯವರನ್ನಪ್ರಭಾರಿಯನ್ನಾಗಿ ನೇಮಕ ಮಾಡಲಾಗಿದೆ.
ಜಿಲ್ಲಾ ಆರೋಗ್ಯಾಧಿಕಾರಿ ರಾಜಕುಮಾರ ವರ್ತನೆಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಬೇಸತ್ತಿತ್ತು. ನೋಟಿಸ್ ಕೊಟ್ಟರು ಸುಧಾರಿಸಿಕೊಳ್ಳದ ಹಿನ್ನೆಲೆಯಲ್ಲಿ ಸರಕಾರ ಕಡ್ಡಾಯ ರಜೆ ಮೇಲೆ ಕಳುಹಿಸಿದಂತಾಗಿದೆ.