ಧಾರವಾಡ: ಜನರಿಗಾಗಿ ಗಟಾರ್ ಕ್ಲೀನ್ ಮಾಡಿ ಮಾದರಿಯಾದ “ಟ್ರಾಫಿಕ್ ಪೊಲೀಸ್ ಟೀಂ”….Exclusive Video

ಧಾರವಾಡ: ನಗರದಲ್ಲಿ ನಿರಂತರವಾಗಿ ಸುರಿದ ಭಾರೀ ಮಳೆಯಿಂದ ರಸ್ತೆಯುದ್ದಕ್ಕೂ ಹೊಳೆಯಂತೆ ಹರಿಯುತ್ತಿದ್ದ ನೀರನ್ನ ಗಟಾರ ಮೂಲಕ ಹೋಗುವಂತೆ ಮಾಡಲು, ಸ್ವತಃ ಪೊಲೀಸರೇ ಮುಂದಾಗಿ ಕಾರ್ಯನಿರ್ವಹಿಸಿದ ಘಟನೆ ನಡೆದಿದೆ.
ಸಾರ್ವಜನಿಕರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಎಎಸ್ಐ ಗುರು ಒಡೆಯರ್, ಹವಾಲ್ದಾರ್ ಬಸವರಾಜ ಮತ್ತು ಕಾನ್ಸಟೇಬಲ್ ಬಂಗಾರಿ, ನೀರು ಹೋಗಲು ಗಟಾರ್ ಸ್ವಚ್ಚಗೊಳಿಸಿದ್ದಾರೆ.
ವೀಡಿಯೋ…
ಸಂಚಾರಿ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀನಿವಾಸ ಮೇಟಿ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳು ಮಾಡಿರುವ ಈ ಕಾರ್ಯ ಮೆಚ್ಚುಗೆಗೆ ಕಾರಣವಾಗಿದೆ.