ಒಂದೇ ಠಾಣೆ- ಬರೋಬ್ಬರಿ 2 ಕೋಟಿ ದಂಡ: ತಪ್ಪು ಮಾಡಿದವರೆಷ್ಟು ಜನಾ ಗೊತ್ತೆ..!
1 min readಧಾರವಾಡ: ಕಾನೂನು ಪಾಲನೆ ಮಾಡಿ ಜೀವವನ್ನೂ ಹಣವನ್ನೂ ಉಳಿಸಿಕೊಳ್ಳಿ ಎಂದು ಪದೇ ಪದೇ ಹೇಳಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂಬುದಕ್ಕೆ ಮತ್ತೊಂದು ಸಾಕ್ಷಿ ದೊರೆತಿದೆ. ಕಾನೂನು ನಿಯಮಗಳನ್ನ ಮುರಿಯುವುದೇ ತಮ್ಮ ಕೆಲಸವೆಂದುಕೊಂಡ ಸಾವಿರಾರೂ ಜನರಿಗೆ ಬಿಸಿ ಮುಟ್ಟಿಸಲಾಗಿದೆ.
ಧಾರವಾಡ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಬರೋಬ್ಬರಿ 36266 ಪ್ರಕರಣಗಳು ನಡೆದಿದ್ದು, ಅವುಗಳಿಗೆ ಸಂಬಂಧಿಸಿದಂತೆ ಬರೋಬ್ಬರಿ 2ಕೋಟಿ 7 ಲಕ್ಷ 46 ಸಾವಿರ ರೂಪಾಯಿ ದಂಡವನ್ನ ವಸೂಲಿ ಮಾಡಲಾಗಿದೆ. ಇದರಲ್ಲಿ ಮದ್ಯಪಾನ ಸೇವಿಸಿದ 177 ಪ್ರಕರಣಗಳು ದಾಖಲಾಗಿದ್ದು, ಅದರಿಂದ 1828500 ರೂಪಾಯಿ ದಂಡ ವಿಧಿಸಲಾಗಿದೆ.
ಧಾರವಾಡದಲ್ಲಿ ವಿದ್ಯಾವಂತರು ಹೆಚ್ಚಿದ್ದಾರೆಂದು ಹೇಳಲಾಗತ್ತೆ. ಆದರೂ, ಇಷ್ಟೊಂದು ಪ್ರಮಾಣದಲ್ಲಿ ದಂಡ ವಿಧಿಸಿರುವುದನ್ನ ನೋಡಿದರೇ, ಕಾನೂನು ನಿಯಮಗಳು ಇಲ್ಲಿ ಪಾಲನೆಯಾಗುತ್ತಿಲ್ಲ ಎಂಬುದು ಗೊತ್ತಾಗತ್ತೆ.
ಸಾರ್ವಜನಿಕರಿಗೆ ಪೊಲೀಸರು ನೀಡುವ ತಿಳುವಳಿಕೆಯನ್ನ ಗಮನಿಸಿಯಾದರೂ, ಸಂಚಾರಿ ನಿಯಮಗಳನ್ನ ಪಾಲನೆ ಮಾಡಬೇಕಿದೆ. ಇಲ್ಲದಿದ್ದರೇ, ನಿಯಮ ಉಲ್ಲಂಘನೆಯಡಿ ನಿಮ್ಮ ಜೇಬು ಖಾಲಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.