ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ಗಣೇಶನ ಸಡಗರ…!

ಧಾರವಾಡ: ನಗರದ ಶಹರ ಪೊಲೀಸ್ ಠಾಣೆಯಲ್ಲಿಂದು ಸಡಗರ ಸಂಭ್ರಮ ಮನೆ ಮಾಡಿತ್ತು. ಪ್ರತಿದಿನವೂ ನಡೆಯುವ ರಗಳೆಗಳ ನಡುವೆ ಇಂದು ಕೆಲಕಾಲ ಪೊಲೀಸರು ಖುಷಿಯನ್ನ ಅನುಭವಿಸಿದರು. ಅದಕ್ಕೆ ಕಾರಣವಾಗಿದ್ದು ವಿಘ್ನನಿವಾರಕನ ಆಗಮನ.

ಹೌದು.. ಶಹರ ಠಾಣೆಯಲ್ಲಿ ಗಣೇಶನ ಪ್ರತಿಷ್ಠಾಪನೆ ವೇಳೆಯಲ್ಲಿ ಸ್ವತಃ ಪೊಲೀಸ್ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ ಅವರು, ಸಿಬ್ಬಂದಿಗಳೊಂದಿಗೆ ಧನ್ಯತಾಭಾವದಿಂದ ಮೂರ್ತಿಯನ್ನ ಠಾಣೆಗೆ ಕರೆತಂದರು.
ಪಿಎಸ್ಐಗಳಾದ, ಭರಮಗೌಡರ, ಎಲ್.ಕೆ.ಕೊಡಬಾಳ, ಎಎಸ್ಐ ಮಹೇಶ ಕುರ್ತಕೋಟಿ, ರಂಜಾನಸಾಬ ನದಾಫ ಸೇರಿದಂತೆ ಠಾಣೆಯ ಬಹುತೇಕ ಸಿಬ್ಬಂದಿಗಳು ಹಾಜರಿದ್ದು, ಗಣೇಶನನ್ನ ಠಾಣೆಗೆ ತಂದು ಪೂಜೆಯನ್ನ ನೆರವೇರಿಸಿದರು.