ಧಾರವಾಡ ತಾಲೂಕು ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಡೇಟ್ ನಿಗದಿ

ಧಾರವಾಡ: ತಾಲೂಕಿನ ಗ್ರಾಮ ಪಂಚಾಯತಿ ಚುನಾವಣೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ದಿನಾಂಕವನ್ನ ನಿಗದಿ ಮಾಡಲಾಗಿದೆ.
ತಾಲೂಕಿನ ಪ್ರತಿ ಗ್ರಾಮ ಪಂಚಾಯತಿಗಳಿಗೆ ಈಗಾಗಲೇ ಮೀಸಲಾತಿಯೂ ಕೂಡಾ ನಿಗದಿಯಾಗಿದ್ದು, ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸಲು ಅಧಿಕಾರಿಗಳನ್ನ ಕೂಡಾ ನೇಮಕ ಮಾಡಲಾಗಿದೆ.
ಗ್ರಾಮ ಪಂಚಾಯತಿ ಅಧಿಕಾರವದಿ ಮುಗಿದು ಏಳು ತಿಂಗಳ ನಂತರ ಚುನಾವಣೆ ನಡೆದಿತ್ತು. ಇದಾದ ನಂತರ ಈಗ ಕೊನೆಯ ಹಂತದ ಆಯ್ಕೆಗೂ ದಿನಾಂಕ ನಿಗದಿಯಾಗಿದ್ದು, ಗ್ರಾಮ ಪಂಚಾಯತಿಗಳು ಸದಸ್ಯರ ಜೊತೆಗೆ ನಡೆಯಲಿವೆ.
ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಹುರುಪಿನಿಂದ ಸದಸ್ಯರಾಗಿರುವ ಜನರು, ಗ್ರಾಮದ ಅಭಿವೃದ್ಧಿಗೆ ಶ್ರಮಿಸುವ ಆಸೆಯನ್ನ ಹೊಂದಿದ್ದಾರೆ. ಅದನ್ನೇ ಮುಂದುವರೆಸಿಕೊಂಡು ಹೋಗ್ತಾರಾ ಅಥವಾ ಗ್ರಾಮದ ಅಭಿವೃದ್ಧಿ ಮರೆತು ನಡೆಯುತ್ತಾರೆ.