ಧಾರವಾಡದಲ್ಲಿ ಮಾರ್ಕೊಪೋಲೊ ಸಿಬ್ಬಂದಿ ಆತ್ಮಹತ್ಯೆ

ಧಾರವಾಡ: ಕೆಲವು ದಿನಗಳ ಹಿಂದೆಯಷ್ಟೇ ಕೊರೋನಾಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದ ಗದಗ ಮೂಲದ ಮೌನೇಶ ಪತ್ತಾರ ಕುಟುಂಬದ ದುರಂತ ಸಾವು ಮರೆಯುವ ಮುನ್ನವೇ ಮತ್ತೋಬ್ಬ ಮಾರ್ಕೊಪೋಲೊ ನೌಕರ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ತಾಲೂಕಿನ ಮಲ್ಲಿಗವಾಡ ರಸ್ತೆಯಲ್ಲಿನ ಪೆಪ್ಸಿ ಕಂಪನಿಯ ಹಿಂಭಾಗದಲ್ಲಿ ನಡೆದಿದೆ.
33 ವಯಸ್ಸಿನ ಶಂಕರಲಿಂಗ್ ಎಂಬ ನೌಕರನೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕಳೆದ 10 ವರ್ಷದಿಂದ ಕೆಲಸ ಮಾಡಿಕೊಂಡಿದ್ದ ಶಂಕರಲಿಂಗ. ಧಾರವಾಡದ ವಿಜಯನಗರಲ್ಲಿ ಈತ ಬಾಡಿಗೆ ಮನೆ ಮಾಡಿಕೊಂಡು ಹೆಂಡತಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸ ವಾಗಿದ್ದ. ಮಾರ್ಕೊಪೋಲೊ ಕಂಪನಿಯಲ್ಲಿ ಈತ ಕಪಲಿಂಗ್ ವಿಭಾಗದಲ್ಲಿ ಕೆಲಸ ಮಾಡಿಕೊಂಡಿದ್ದ.
ರಾಯಚೂರು ಮೂಲದ ಈತನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲಾ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.