Posts Slider

Karnataka Voice

Latest Kannada News

ನರೇಂದ್ರ “ಪೊಲೀಸರಿಗೆ ಹೊಡೆತ” ಎಸ್ಪಿ ಗೋಪಾಲ ಬ್ಯಾಕೋಡ್ ಕೊಟ್ಟರು ಮಾಹಿತಿ…

1 min read
Spread the love

ಪೊಲೀಸರ ಮೇಲೆ ಹಲ್ಲೆ ನಡೆಸಿದ ಜೂಜುಕೋರ ಬಂಧನ

ಎಸ್ಪಿ ಮಾಹಿತಿ

ಧಾರವಾಡ: ಜೂಜಾಟದ ಅಡೆಯ ಮೇಲೆ ದಾಳಿ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಎಂಟು ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ‌ ಬ್ಯಾಕೋಡ ತಿಳಿಸಿದರು.

ನಗರದಲ್ಲಿ ಮಾದ್ಯಮಗಳಿಗೆ ಈ ಕುರಿತು ಮಾಹಿತಿ ನೀಡಿದ ಅವರು, ತಾಲೂಕಿನ ನರೇಂದ್ರ ಗ್ರಾಮದ ಶಾಲೆ ಬಳಿಯಲ್ಲಿ ಜೂಜಾಟ ಆಡುತ್ತಿದ್ದ ಸಂದರ್ಭದಲ್ಲಿ, ನಿನ್ನೆ ಸೋಮವಾರ ತಡರಾತ್ರಿ 1 ಗಂಟೆಗೆ ಅಧಿಕಾರಿಗಳು ಗಸ್ತಿನಲ್ಲಿದ್ದರು, ಜೂಜಾಟ ನಡೆಸುತ್ತಿರುವ ಖಚಿತ ಮಾಹಿತಿ ಬಂದಿತ್ತು, ಆಗ ನಮ್ಮ ಸಿಬ್ಬಂದಿ ದಾಳಿ ಮಾಡಿದ್ದ ಸಂದರ್ಭದಲ್ಲಿ ಪಿಎಸ್‌ಐ ಮತ್ತು ಸಿಬ್ಬಂದಿ ಮೇಲೆ ಕೆಲವರು ದಾಳಿ ಮಾಡಿದ್ದಾರೆ.

ವೀಡಿಯೋ…

ಸದ್ಯ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣದ ದಾಖಲಾಗಿದ್ದು, ಪ್ರಕರಣದ 8 ಜನ ಆರೋಪಿಗಳನ್ನು ಬಂಧನ ಮಾಡಲಾಗಿದೆ. ಉಳಿದವರ ಪತ್ತೆ ಕಾರ್ಯ ನಡೆದಿದ್ದು, ಹತ್ತು ಜನ ಶಂಕಿತರಿದ್ದಾರೆ ಎಂದು ತಿಳಿಸಿದರು.

ಘಟನೆಯಲ್ಲಿ ಪಿಎಸ್‌ಐ ಬಸನಗೌಡರಿಗೆ ಕೈ ಮತ್ತು ಕುತ್ತಿಗೆಗೆ ಗಾಯವಾಗಿದ್ದು, ಕಾನ್ಸಟೆಬಲ್ ನಾಗರಾಜ್ ಎಂಬುವವರ ತಲೆಗೆ ಪೆಟ್ಟಾಗಿದೆ. ಇಬ್ಬರೂ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.


Spread the love

Leave a Reply

Your email address will not be published. Required fields are marked *

You may have missed