ಧಾರವಾಡದ “SP” ಕಚೇರಿ- Home Minister: “Before-After”…

ಧಾರವಾಡ: ನಗರದ ಬೆಳಗಾವಿ ರಸ್ತೆಯಲ್ಲಿರುವ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಮುಂದೆ ಇವತ್ತು ಸೋಜಿಗದ ಘಟನೆಗಳು ನಡೆದಿದ್ದು, ಪೊಲೀಸರು ಹಿಡಿಯುವ ‘Before-After’ ಸ್ಟೋರಿಯಂತಾಗಿತ್ತು.

ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಮೊದಲ ಬಾರಿಗೆ ಅವಳಿನಗರಕ್ಕೆ ಆಗಮಿಸಿ, ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಲು ಬರುತ್ತಿದ್ದರು. ಇದರಿಂದ ರಾಜಕೀಯ ನಾಯಕರು ಕಚೇರಿಯ ಮುಂಭಾಗ ಬ್ಯಾನರ್‌ಗಳನ್ನ ಕಟ್ಟಿ, ಮೊದಲ ಬಾರಿಗೆ ರಾಜಕೀಯ ಕಾರ್ಯಕ್ರಮದಂತೆ ಭಾಸವಾಗುತ್ತಿತ್ತು.
ದಕ್ಷ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ಅವರು ಬ್ಯಾನರ್‌ಗಳನ್ನ ಗೃಹ ಮಂತ್ರಿಗಳು ಬರುವ ಮುನ್ನವೇ ಅಲ್ಲಿಂದ ತೆರವುಗೊಳಿಸಿ “Before-After’ ಕರ್ತವ್ಯ ನಿಭಾಯಿಸಿದ್ದಾರೆ.