ಧಾರವಾಡ ಲೇಡಿ ಪಿಎಸೈ ಕಾರ್ಯಾಚರಣೆ: ಹಿತ್ತಲಲ್ಲೇ ಬೆಳೆದಿತ್ತು ಗಾಂಜಾ ಗಿಡ
ಧಾರವಾಡ: ಯಾರಿಗೂ ಗೊತ್ತಾಗದ ಹಾಗೇ ಹಿತ್ತಲಿನಲ್ಲೇ ಗಾಂಜಾ ಬೆಳೆದಿದ್ದನ್ನ ಪತ್ತೆ ಹಚ್ಚಿರುವ ಲೇಡಿ ಪಿಎಸೈ, ಆರೋಪಿಯನ್ನ ಬಂಧಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.
ಧಾರವಾಡ ಗ್ರಾಮೀಣ ಠಾಣೆಯ ಪಿಎಸೈ ಸುಮಾ ಗೋರಬಾಳ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹಿರೇಮಲ್ಲಿಗವಾಡ ಗ್ರಾಮದ ರಾಮನಗೌಡ ಕಲ್ಲನಗೌಡ ಪಾಟೀಲ, ತನ್ನ ಹಿತ್ತಲಿನಲ್ಲೇ ಗಾಂಜಾವನ್ನ ಬೆಳೆದಿದ್ದ.
ಇಂದು ಸಂಜೆ ನಡೆದ ಕಾರ್ಯಾಚರಣೆಯಲ್ಲಿ 2ಕೆಜಿ 650 ಗ್ರಾಂ ಹಸಿ ಗಾಂಜಾವನ್ನ ವಶಕ್ಕೆ ಪಡೆದು ಆರೋಪಿಯನ್ನ ಬಂಧನ ಮಾಡಲಾಗಿದೆ.
ಆರೋಪಿಯ ಮೇಲೆ ಎನ್.ಡಿ.ಪಿ.ಎಸ್ ಕಾಯ್ದೆ ಪ್ರಕಾರ ಪ್ರಕರಣ ದಾಖಲು ಮಾಡಿದ್ದು, ಮಹಿಳಾ ಪಿಎಸೈ ಸುಮಾ ಅವರೇ ದೂರುದಾರರಾಗಿದ್ದು, ಪಿಎಸೈ ಮಹೇಂದ್ರಕುಮಾರ ನಾಯಕ ಕ್ರಮವನ್ನ ಜರುಗಿಸಿದ್ದಾರೆ.