ಧಾರವಾಡ ಗ್ರಾಮೀಣ: ಯಾವೂರು ಪಂಚಾಯತಿಗೆ ಯಾವ ಕೆಟಗೇರಿ

ಧಾರವಾಡ: ತಾಲೂಕಿನ ಗ್ರಾಮ ಪಂಚಾಯತಿ ಚುನಾವಣೆಗಳು ನಡೆದು ವಾರದ ನಂತರ ಇಂದು ಆಯಾ ಗ್ರಾಮ ಪಂಚಾಯತಿಗಳ ಮೀಸಲಾತಿಯನ್ನ ನಿಗದಿ ಮಾಡಲಾಗಿದೆ. ಪ್ರತಿ ಗ್ರಾಮ ಪಂಚಾಯತಿ ಸದಸ್ಯರ ಸಮ್ಮುಖದಲ್ಲಿಯೇ ಮೀಸಲಾತಿಯನ್ನ ಆಯ್ಕೆ ಮಾಡಲಾಗಿದೆ.
ಮೀಸಲಾತಿ ಲಿಸ್ಟ್ ಇಲ್ಲಿದೆ ನೋಡಿ..
ಧಾರವಾಡದ 35 ಗ್ರಾಮ ಪಂಚಾಯತಿಗಳಿಗೆ ಕಟೆಗೇರಿಯನ್ನ ಕರ್ನಾಟಕ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ನಡೆಸಲಾಯಿತು. ಪ್ರತಿ ಸಲವೂ ಗ್ರಾಮ ಪಂಚಾಯತಿ ಸದಸ್ಯರನ್ನ ಕರೆದು ಮೀಸಲಾತಿಯನ್ನ ನಿಗದಿ ಮಾಡಲಾಯಿತು.
ಶಿವಳ್ಳಿ ಗ್ರಾಮ ಪಂಚಾಯತಿಗೆ ಜನರಲ್ ಅಧ್ಯಕ್ಷ ಸ್ಥಾನ, ಜನರಲ್ ಮಹಿಳೆ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಬಂದಿದೆ. ಹೆಬ್ಬಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನ ಜನರಲ್ ಮಹಿಳೆ, ಉಪಾಧ್ಯಕ್ಷ ಸ್ಥಾನ ಕೆಟಗೇರಿ ಎ ಮೀಸಲಾತಿ ಬಂದಿದೆ.