ಧಾರವಾಡದಲ್ಲಿ ಹತ್ಯೆಯಾಗಿದ್ದು ನಿವೃತ್ತ ಪ್ರೊಫೆಸರ್… 5 ಎಕರೆ ಮಾರಾಟದ ಹಿಂದೆ ಕರಾಳ ಸತ್ಯ…

ಧಾರವಾಡ: ಭೀಕರವಾಗಿ ಧಾರವಾಡದ ಮರಾಠಾ ಕಾಲನಿಗೆ ಅಂಟಿಕೊಂಡಿರುವ ಕೊಪ್ಪದಕೇರಿ ರಸ್ತೆಯಲ್ಲಿ ಹತ್ಯೆಯಾಗಿರುವುದು ನಿವೃತ್ತ ಪ್ರೊಫೆಸರ್ ಎಂಬ ಮಾಹಿತಿ ಬಹಿರಂಗವಾಗಿದೆ.
ಮೂಲತಃ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ನಿಂಗಪ್ಪ ಹಡಪದ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದರು. ಮದುವೆ ಇಲ್ಲದೇ ಇದ್ದರೂ, ಅವರ ಕಾಕಾ (ಚಿಕ್ಕಪ್ಪ) ತನ್ನ ಆಸ್ತಿಯನ್ನೂ ಇದೇ ನಿಂಗಪ್ಪ ಹಡಪದ ಅವರ ಹೆಸರಿಗೆ ಮಾಡಿದ್ದರು. ಹತ್ಯೆಯಾದ ನಿಂಗಪ್ಪ ಅವರ ಹೆಸರಿನಲ್ಲಿ ಒಂಬತ್ತು ಕುರೀಗೆ (36 ಎಕರೆ) ಭೂಮಿಯಿತ್ತು.
ಇವರ ಖಾಸಾ ಸಹೋದರ ಕಲ್ಲಪ್ಪನಿಗೆ ಮೂರು ಮಕ್ಕಳಿದ್ದು, ಅವರನ್ನೇ ದತ್ತಕ್ಕೆ ತೆಗೆದುಕೊಂಡು ಜಮೀನು ಕೊಡುವಂತೆ ಕೇಳಿಕೊಂಡಿದ್ದ ಕಲ್ಲಪ್ಪ. ಆದರೆ, ಯಾವುದೇ ಒಪ್ಪಿಗೆ ನೀಡದೇ ಪ್ರೊಫೆಸರ್ ಹಠ ಹಿಡಿದು ಸುಮ್ಮನಾಗಿದ್ದ.
ಇದೇ ಸಮಯದಲ್ಲಿ ಸ್ಥಳೀಯರೊಬ್ಬರಿಗೆ ಐದು ಎಕರೆ ಜಮೀನು ಮಾರಾಟವನ್ನ ಪ್ರೊಫೆಸರ್ ಮಾಡಿದ್ದರು. ಸಾಕಷ್ಟು ಹಣವಿದ್ದರೂ ಜಮೀನು ಮಾರಾಟ ಮಾಡುತ್ತಿದ್ದಾನೆ. ಹೀಗೆ ಬಿಟ್ಟರೇ ಉಳಿದ ಹೊಲವನ್ನೂ ಮಾರಾಟ ಮಾಡಿ ಬಿಡ್ತಾನೆ ಅಂದುಕೊಂಡು ಈ ಪ್ಲಾನ್ ರೂಪಿಸಿ, ಕಲ್ಲಪ್ಪ ತಲ್ವಾರನಿಂದ ಹೊಡೆದು ಹತ್ಯೆ ಮಾಡಿದ್ದಾನೆ.
ಆಸ್ತಿ ಅಣ್ಣನ ಸಾವಿಗೆ, ತಮ್ಮನ ಸೆರೆವಾಸಕ್ಕೆ ಕಾರಣವಾಗಿದ್ದು ದುರ್ವಿಧಿಯ ಕೈವಾಡ ಎನ್ನಬಹುದಲ್ವೆ..