ಧಾರವಾಡ ಜೈಲಿನಲ್ಲಿ ನಿಲ್ಲದ “ಪಚ್ಚಿ”ಯ ‘ಅಪ್ಪಚ್ಚಿ ಹಾವಳಿ’: Exclusive video

ಧಾರವಾಡ: ನಗರದ ಕೇಂದ್ರ ಕಾರಾಗೃಹದಲ್ಲಿ ಇಬ್ಬರು ಕೈದಿಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಓರ್ವ ಕೈದಿಗೆ ಇನ್ನೋರ್ವ ಕೈದಿ ಟೈಲ್ಸ್ ನ್ನ ಚಾಕು ರೀತಿ ಬಳಕೆ ಮಾಡಿ ಇರಿದಿರುವ ಘಟನೆ ನಡೆದಿದೆ.
ಸುಲೇಮಾನ್ ಎಂಬ ಕೈದಿಯೇ ಇದೀಗ ಇರಿತಕ್ಕೆ ಒಳಗಾದ ಕೈದಿ. ಪಚ್ಚಿ ಎಂಬ ಇನ್ನೋರ್ವ ಕೈದಿ ಸುಲೇಮಾನ್‌ಗೆ ಟೈಲ್ಸ್‌ನಿಂದ ಇರಿದಿದ್ದಾನೆ. ಉಡುಪಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಚ್ಚಿ ಎಂಬಾತ ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾನೆ.
ವೀಡಿಯೋ…
ಧಾರವಾಡಕ್ಕೆ ಬಂದ ಮೇಲೆ ಪಚ್ಚಿ ಎಂಬ ಈತ ಮೂರನೇ ಬಾರಿ ಹಲ್ಲೆ ಮಾಡಿದ್ದಾನೆ. ಕಳೆದ ನಾಲ್ಕು ತಿಂಗಳ ಹಿಂದೆ ಧಾರವಾಡ ಜೈಲು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಎಂದು ಗೊತ್ತಾಗಿದೆ. ಇಂದು ಕ್ಷುಲ್ಲಕ ಕಾರಣಕ್ಕಾಗಿ ಪಚ್ಚು ಸುಲೇಮಾನ್ ಎಂಬಾತನ ಮೇಲೆ ಮತ್ತೆ ಹಲ್ಲೆ ಮಾಡಿದ್ದಾನೆ.
ಸದ್ಯ ಘಟನಾ ಸ್ಥಳಕ್ಕೆ ಎಸಿಪಿ ಬಸವರಾಜ್ ಹಾಗೂ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಚ್ಚಿ ಎಂಬಾತನ ಮೇಲೆ ಉಪನಗರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.