ಹುಬ್ಬಳ್ಳಿ-ಧಾರವಾಡ “ಪೊಲೀಸ್” ಮಹಾತ್ಸಾಧನೆ: ಬಾಡಿಗೆ ಸೈಕಲ್ ಪಡೆದು ‘ಐರನ್ ಮ್ಯಾನ್’ ಆದ ಕಿರಣ ಗಾಣಿಗೇರ

ಧಾರವಾಡ: ಗ್ರಾಮೀಣ ಭಾಗದಿಂದ ಬಂದ ಪೊಲೀಸರೋರ್ವರು ಇಡೀ ರಾಜ್ಯದಲ್ಲಿಯೇ ಇಲಾಖೆ ಮೆಚ್ಚುವಂತಹ ಸಾಧನೆಯನ್ನ ಸದ್ದಿಲ್ಲದೇ ಮುಗಿಸಿಕೊಂಡು ಬಂದಿದ್ದಾರೆ.

ಹುಬ್ಬಳ್ಳಿ-ಧಾರವಾಡ ಸಿವಿಲ್ ಪೊಲೀಸ್ ಆಗಿರುವ ಕಿರಣ ಗಾಣಗೇರ ಎಂಬುವವರೇ ಈ ಸಾಧನೆಯ ಮಾಡಿದ್ದು, ಸಧ್ಯ ಅವರು ಸಿಎಸ್ ಬಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
2007ರ ಬ್ಯಾಚಿನ ಕಿರಣ ಗಾಣಗೇರ ಮೂಲತಃ ಸವದತ್ತಿ ತಾಲೂಕಿನ ಅಸುಂಡಿ ಗ್ರಾಮದವರಾಗಿದ್ದು, ಧಾರವಾಡದ ವಿದ್ಯಾಗಿರಿ ಹಾಗೂ ಸಂಚಾರಿ ಠಾಣೆಯಲ್ಲಿ ಕರ್ತವ್ಯನಿರ್ವಹಿಸಿದ್ದಾರೆ.

ಕೊಲ್ಲಾಪುರದಲ್ಲಿ ಸುಮಾರು 1 ಸಾವಿರ ಸ್ಫರ್ಧಾಳುಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ 7 ಗಂಟೆ 33 ನಿಮಿಷದಲ್ಲಿ 113 ಕಿ.ಮೀ ರನ್ನಿಂಗ್, ಸೈಕ್ಲಿಂಗ್ ಹಾಗೂ ಸೈಕ್ಲಿಂಗ್ ಮಾಡಿ ಸಾಧನೆ ಮಾಡಿದ್ದಾರೆ.
1.9 ಕಿ.ಮೀ ಸ್ವಿಮ್ಮಿಂಗ್, 90 ಕಿ.ಮೀ ಸೈಕ್ಲಿಂಗ್ ಹಾಗೂ 21.1 ಕಿ.ಮೀ ರನ್ನಿಂಗ್ ಮಾಡಿ ಹಾಫ ಐರನ್ ಮ್ಯಾನ್ ಆಗಿ ಹೊರ ಹೊಮ್ಮಿದ್ದಾರೆ. ಕಿರಣ ಗಾಣಗೇರ ಸಂಚಾರಿ ಠಾಣೆಯಲ್ಲಿ ಕಾರ್ಯನಿರ್ವಹಿಸುವಾಗ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣನವರ ಈ ಸಾಧನೆ ಮಾಡಿದ್ದನ್ನ ಇಲ್ಲಿ ಸ್ಮರಿಸಬಹುದು.
ಕಿರಣ ಗಾಣಗೇರ ಸಾಧನೆಯನ್ನ ಇಲಾಖೆಯು ಕೊಂಡಾಡಿದ್ದು, ಪ್ರತಿಯೊಂದು ಪೊಲೀಸರಲ್ಲೂ ಹೊಸ ಕಿರಣ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.