ಧಾರವಾಡ ಜಿಲ್ಲೆಯ ಸೋಂಕಿತ 6 ಜನ ಮೃತರು ಎಲ್ಲಿಯವರು ಗೊತ್ತಾ…?
ಧಾರವಾಡ: ಕೋವಿಡ್ ಪಾಸಿಟಿವ್ ಹೊಂದಿದ್ದ. ಜಿಲ್ಲೆಯ ನಾಲ್ವರು ಹಾಗೂ ಉತ್ತರ ಕನ್ನಡ ಜಿಲ್ಲೆ ಮತ್ತು ಬೆಳಗಾವಿ ಜಿಲ್ಲೆಯ ತಲಾ ಒಬ್ಬರು ಸೇರಿ ಒಟ್ಟು ಆರು ಜನ ಕಳೆದ ಮೂರು ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಪಿ-94968 (50,ಪುರುಷ) ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪೂರ ನಿವಾಸಿ.
ಪಿ-68237 (60, ಮಹಿಳೆ) ಧಾರವಾಡ ಟೋಲ್ ನಾಕಾ ನಿವಾಸಿ.
ಪಿ-76884 (64 ,ಪುರುಷ) ಹುಬ್ಬಳ್ಳಿ ಮಂಟೂರ ರಸ್ತೆಯ ಕೃಪಾ ನಗರದ ಅರಳಿಕಟ್ಟಿ ಕಾಲೋನಿ ನಿವಾಸಿ.
ಪಿ-95177 (64, ಮಹಿಳೆ) ಹುಬ್ಬಳ್ಳಿಯ ಕರ್ಕಿ ಬಸವೇಶ್ವರನಗರ ನಿವಾಸಿ.
ಪಿ-95121 (72, ಮಹಿಳೆ) ಹಳೇ ಹುಬ್ಬಳ್ಳಿಯ ಅಯೋಧ್ಯಾನಗರ ನಿವಾಸಿ.
ಪಿ- 83417 (78, ಮಹಿಳೆ) ಸವದತ್ತಿ ತಾಲೂಕಿನ ಚಿಕ್ಕುಂಬಿ ಗ್ರಾಮದ ನಿವಾಸಿ.
ಇವರೆಲ್ಲರೂ ತೀವ್ರ ಉಸಿರಾಟದ ತೊಂದರೆ ಹಾಗೂ ಜ್ವರ, ಕಫ, ಎದೆ ನೋವು ಮತ್ತಿತರ ಲಕ್ಷಣಗಳನ್ನು ಹೊಂದಿದ್ದರು.
ನಿಯಮಾನುಸಾರ ಪಾರ್ಥಿವ ಶರೀರಗಳನ್ನು ಅಂತ್ಯಕ್ರಿಯೆ ಮಾಡಲಾಗಿದೆ