ಧಾರವಾಡ: ಶಾಲೆ ಕಾಲೇಜು ರಜೆಯಿಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ

ಹುಬ್ಬಳ್ಳಿ: ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ರಾಜ್ಯಾದ್ಯಂತ ಬಂದ್ ಕರೆ ನೀಡಿದ್ದು ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಶಾಲಾ ಕಾಲೇಜುಗಳು ಯಾವುದೇ ರೀತಿಯಾಗಿ ರಜೆ ಇಲ್ಲವೆಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು…
ನಗರದಲ್ಲಿಂದು ಮಾತನಾಡಿದ ಜಿಲ್ಲಾಧಿಕಾರಿ ದೀಪಾ ಚೋಳನ ಹಾಗೂ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ R. ದಿಲೀಪ್, ಬಂದ್ ಹಾಗೂ ಪ್ರತಿಭಟನೆ ಮಾಡಲು ಯಾರು ಕೂಡಾ ಮನವಿ ಕೊಟ್ಟಿಲ್ಲ ಹೀಗಾಗಿ ಅವಳಿ ನಗರದಲ್ಲಿ ಬಂದ್ ಗೆ ಯಾವುದೇ ರೀತಿಯಾದ ವ್ಯತಿರಿಕ್ತ ವಾತಾವರಣ ಇಲ್ಲ ಎಂದರು