ಧಾರವಾಡ “ಡಿಡಿಪಿಐ ಕೆಳದಿಮಠ” ವಿರುದ್ಧ ಇಂದು FIR…!?

ಹುಬ್ಬಳ್ಳಿ: ಅನುದಾನ ನೀಡಲು ಕಾನೂನು ಬಾಹಿರ್ ಚಟುವಟಿಕೆ ನಡೆಸಲಾಗಿದ್ದು, ಅದಕ್ಕಾಗಿ ಪ್ರಮುಖ ಪತ್ರಿಕೆಯನ್ನೇ ನಕಲಿ ಮಾಡಿದ ವಿಷಯವಾಗಿ ವಂಚನೆ ಮಾಡಲಾಗಿದೆ ಎಂಬ ದೂರನ್ನ ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ವಿರುದ್ಧ ಮಂಟೂರ ಗ್ರಾಮಸ್ಥರು ಇಂದು ನೀಡಲಿದ್ದಾರೆಂದು ಗೊತ್ತಾಗಿದೆ.
ದೂರು ಸಲ್ಲಿಕೆಯಾದರೇ ಧಾರವಾಡ ಡಿಡಿಪಿಐ ವಿರುದ್ಧ ಎಫ್ಐಆರ್ ದಾಖಲಾಗಲಿದ್ದು, ಶಿಕ್ಷಣ ಇಲಾಖೆಯ ಧಾರವಾಡ ಜಿಲ್ಲೆಯ ಗೌರವ ಪೊಲೀಸ್ ಠಾಣೆಯಲ್ಲಿ ನಿರ್ಧಾರವಾಗಲಿದೆ.
ಮಂಟೂರ ಶಾಲೆಗೆ ಅನುದಾನ ಬಿಡುಗಡೆ ಮಾಡುವ ಹುನ್ನಾರದಲ್ಲಿ ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರು ಸಕ್ರಿಯರಾಗಿದ್ದಾರೆ ನೊಂದವರು ದೂರಿದ್ದು, ಇದೇ ಕಾರಣಕ್ಕೆ ಪೊಲೀಸ್ ಠಾಣೆಗೆ ತೆರಳುತ್ತೇವೆ ಎಂದಿದ್ದಾರೆ.
ಧಾರವಾಡ ಡಿಡಿಪಿಐ ಅವರು ಇಲಾಖೆಯಲ್ಲಿ ಹಲವು ಪ್ರಮಾದಗಳನ್ನ ಮಾಡುತ್ತ ನಡೆದಿದ್ದು, ತಾವೇ ಮಾಡಿರುವ ಡೆಪ್ಟೇಟೇಷನ್ ಆದೇಶಗಳಿಗೂ ಧೂಳು ಹಿಡಿಯುತ್ತಿವೆ. ಆದರೂ, ಏನೂ ಆಗಿಲ್ಲವೆಂಬಂತೆ ಅಲೆದಾಡುವ ಆತ್ಮಗಳು ಕಂಡು ಬರುತ್ತಿವೆ.