Posts Slider

Karnataka Voice

Latest Kannada News

ಡಿಡಿಪಿಐ “ಕೆಳದಿಮಠ” ಅವರೇ, ನಿಮ್ಮ ಮಾತಿಗೂ.. ಕೃತಿಗೂ “ಲಿಂಕ್” ಇರಬೇಕಲ್ವೆ…!

1 min read
Spread the love

ಧಾರವಾಡ: ಜಿಲ್ಲೆಯ ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಮಾತಿಗೂ ಕೃತಿಗೂ ಸಂಬಂಧವೇ ಇರದ ಪ್ರಕರಣವೊಂದು ಬಯಲಿಗೆ ಬಂದಿದೆ.

ಧಾರವಾಡದ ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರು ಬಹಳ ಬುದ್ಧಿವಂತರು ಎಂದು ತಮ್ಮನ್ನ ತಾವೇ ತಿಳಿದುಕೊಂಡು ಹಲವರನ್ನ ದಾರಿ ತಪ್ಪಿಸುತ್ತ ನಡೆದಿದ್ದಾರೆ. ಅದಕ್ಕೆ ಮತ್ತೊಂದು ತಾಜಾ ಉದಾಹರಣೆ ಹೊರಬಿದ್ದಿದೆ.

ಕನ್ನಡದ ಪ್ರಮುಖ ಪತ್ರಿಕೆಯಲ್ಲಿ ನವಲೂರ ಶಾಲೆಯಿಂದ ಡೆಪ್ಟೇಟೇಷನ್ (ಇಲ್ಲದ ಪೋಸ್ಟ್) ಮಾಡಿಸಿಕೊಂಡು ಹಲವು ವರ್ಷಗಳಿಂದ ಇಲ್ಲಿಯೇ ಅಲೆದಾಡುತ್ತಿರುವ ಶಶಿಕಾಂತ ಬಸಾಪುರ ಅವರ ಬಗ್ಗೆ ಕೆಲವರು  ಅನಾವಶ್ಯಕ ಆರೋಪ ಮಾಡುತ್ತಿದ್ದಾರೆಂದು ಹೇಳಿರುವುದು ಪ್ರಿಂಟ್ ಆಗಿದೆ.

ಇಂತಹ ಮಹಾನುಭಾವ ಡಿಡಿಪಿಐ ಕೆಳದಿಮಠ ಅವರು, ಬಸಾಪುರ ಬಗ್ಗೆ ಕಾಳಜಿ ಇದ್ದರೇ, ಅವರನ್ನ ನವಲೂರ ಕಳಿಸಬೇಕೆಂದು ಆದೇಶವನ್ನ ಏಕೆ ಮಾಡಿದ್ರು..!? ನವಲೂರ ಶಾಲೆಗೆ ನೇಕಾರನಗರದಿಂದ ಬಂದಿರುವ ಶಿಕ್ಚಕ ದೊಡ್ಡಮನಿ ಅವರನ್ನ ಮತ್ತೆ ಮರಳಿ ಶಾಲೆಗೆ ಕಳಿಸಿ ಎಂದು ಆದೇಶ ಏಕೆ ಮಾಡಿದರು…!? ಪಾಪ… ಕೆಳದಿಮಠ ಅವರು ಬಹಳ ಮುಗ್ಧರು, ಏನೇನೋ ಹೇಳುವುದು, ಮಾತಿನಂತೆ ನಡೆದುಕೊಳ್ಳದಿರುವುದು ಅವರಿಗೆ ಗೊತ್ತೆ ಆಗಲ್ಲ.

ಇಷ್ಟೊಂದು ಮುಗ್ಧ ಮನಸ್ಸಿನ ಡಿಡಿಪಿಐ ಅವರನ್ನ ಧಾರವಾಡ ಜಿಲ್ಲೆ ಯಾವತ್ತೂ ಕಂಡೇ ಇಲ್ಲಾ… ನವಲೂರ ಶಾಲೆಯ ಮಕ್ಕಳಿಗೆ ಪಾಠ ಮಾಡದೇ ಸಂಬಳ ಪಡೆಯಬೇಕೆಂದು ಅಲೆಯುತ್ತಿರುವ ಶಶಿಕಾಂತ ಬಸಾಪುರ ಅವರದ್ದು ಬಹಳ ಉತ್ತಮ ಕಾರ್ಯ. ಮನಃಸಾಕ್ಷಿಯನ್ನ ಅತೀಯಾಗಿ ನಂಬುವ ಇಂತಹ ಮಹಾನ್ ಅಧಿಕಾರಿಗಳಿಂದಲೇ ಉದ್ಧಾರ ಆಗ್ತಿದೆಯಲ್ವೇ… 😁😁😁😁😂


Spread the love

Leave a Reply

Your email address will not be published. Required fields are marked *