“ಡಿಸಿ ಮೇಡಂ ಗಂಭೀರತೆ ನಮೂದಿಸಿ “BEO, BRP, BRC”ಗಳಿಗೆ ಧಾರವಾಡ ಡಿಡಿಪಿಐ ನೋಟೀಸ್…!!! Impact News…,
1 min readಧಾರವಾಡ: ಖಾಲಿ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯ ವೀಡಿಯೋ ವೈರಲ್ ಆಗುತ್ತಿದ್ದ ಹಾಗೇ ಎಚ್ಚೆತ್ತುಕೊಂಡಿರುವ ಧಾರವಾಡದ ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್. ಎಸ್.ಕೆಳದಿಮಠ ಅವರು ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ.
ಕರ್ನಾಟಕವಾಯ್ಸ್.ಕಾಂ ಖಾಲಿ ಮೈದಾನದ ಚಿತ್ರಣವನ್ನ ಹೊರ ಹಾಕಿತ್ತು. ರಾಜ್ಯೋತ್ಸವ ಆಚರಣೆಯ ಹಿಂದಿನ ಅಸಡ್ಡೆಯ ಬಗ್ಗೆ ಪ್ರಶ್ನಿಸಿತ್ತು. ಇದಾದ ಕೆಲವು ಸಮಯದಲ್ಲಿ ಬಿಇಓ ಸೇರಿದಂತೆ ಕೆಳ ಹಂತದ ಸಮೂಹಕ್ಕೆ ನೋಟೀಸ್ ಜಾರಿ ಮಾಡಿರುವ ಡಿಡಿಪಿಐ ಕೆಳದಿಮಠ ಅವರು ತಮ್ಮ ಜಾಣ್ಮೆಯನ್ನ ಮೆರೆದಿದ್ದಾರೆ.
ಇಂದು ಕಾರಣ ಕೇಳಿ ನೀಡಿರುವ ನೋಟೀಸ್‌ನಲ್ಲಿ 15.10.2024ರ ಸಭಾ ನಡವಳಿಯನ್ನ ಉಲ್ಲೇಖ ಮಾಡಿ, ಇಂದು ಕಾರಣ ಕೇಳಿ ನೋಟೀಸ್ ಜಾರಿ ಮಾಡಿರುವುದರಲ್ಲಿ “ಜಿಲ್ಲಾಧಿಕಾರಿಗಳು ಇಂದಿನ ವಿಷಯವನ್ನ ಗಂಭೀರವಾಗಿ” ತೆಗೆದುಕೊಂಡಿದ್ದಾರೆ ಎಂದು ತಿಳಿಸಲಾಗಿದೆ.
ಡಿಡಿಪಿಐ ಅವರಿಗೆ ಇಂದು ಕೂಡಾ ಗಂಭೀರತೆಯಿಲ್ಲ ಮತ್ತೂ ಮೇಲಿನ ಅಧಿಕಾರಿಗಳು ಹೇಳಿದ್ದರಿಂದ ತಾವೂ ಇದನ್ನ ಜಾರಿ ಮಾಡುತ್ತಿದ್ದೇನೆ ಎಂಬಂತಹ ನೋಟೀಸ್ ಜಾರಿ ಮಾಡಿರುವುದು ಕೆಳದಿಮಠ ಅವರ ಗಂಭೀರತೆಯನ್ನ ತೋರಿಸುತ್ತದೆ.
ಬೇರೆಯವರ ಮೇಲೆ ಹಾಕುತ್ತ ಸಾಗಿ ದಿನಗಳನ್ನ ಕಳೆಯುತ್ತಿರುವ ದಕ್ಷ, ಪ್ರಾಮಾಣಿಕ, ಸರಕಾರದ ಆದೇಶಗಳನ್ನ ಚಾಚು ತಪ್ಪದೇ ಪಾಲಿಸುವ ಡಿಡಿಪಿಐ ಕೆಳದಿಮಠ ಅವರ ಅವಶ್ಯಕತೆ ಧಾರವಾಡ ಎಂಬ ವಿದ್ಯಾಕಾಶಿಗೆ ತೀರಾ ಅವಶ್ಯವಿದೆ. ಹಾಗಾಗಿಯೇ, ಏನೇ ನಡೆದರೂ ಅವರಿವರ ಮೇಲೆ ಹಾಕಿ ದಿನಗಳನ್ನ ಕಳೆಯುವ ಖಯಾಲಿ ಮುಂದುವರೆದಿದೆ…😂