ಧಾರವಾಡದ SDM ಡಾ.ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲೇ ನಡೆಯುತ್ತಿದೆ ಮದುವೆ… ನ್ಯಾಯ ಅಂದ್ರೆ ಇದು….!?
1 min readಧಾರವಾಡ: ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುವುದಕ್ಕೆ ಕಾರಣವಾಗಿರೋ ಎಸ್ ಡಿಎಂ ವೈದ್ಯಕೀಯ ಆಸ್ಪತ್ರೆಗೆ ಅಂಟಿಕೊಂಡೇ ಇರುವ ಡಾ.ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಮದುವೆಯೊಂದು ನಡೆಯುತ್ತಿದ್ದು, ಜಿಲ್ಲಾಡಳಿತದ ನಿಲುವು ಹಲವು ಪ್ರಶ್ನೆಗಳನ್ನ ಮೂಡಿಸಿದೆ.
ಆಸ್ಪತ್ರೆಯ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮ ನಡೆದ ಮೇಲೆ ನೂರಾರೂ ಕೊರೋನಾ ಪ್ರಕರಣಗಳು ಪತ್ತೆಯಾದವು. ಈ ಮಾಹಿತಿ ರಾಜ್ಯವಲ್ಲದೇ, ರಾಷ್ಟ್ರೀಯ ವಾಹಿನಿಗಳಲ್ಲೂ ಸುದ್ದಿಯಾಯಿತು. ಸ್ವತಃ ಸಿಎಂ ಬಸವರಾಜ ಬೊಮ್ಮಾಯಿಯವರೇ ಮಾರ್ಗದರ್ಶನ ಮಾಡುವ ಸ್ಥಿತಿ ಬಂತು.
ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಸ್ವತಃ ಪರಿಶೀಲನೆ ನಡೆಸಿ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಿದ್ರು. ಸುಮಾರು 500 ಮೀಟರ್ ಅಂತರದಲ್ಲಿ ಇರುವ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ರು. ಅಷ್ಟೇ ಏಕೆ, ಆಸ್ಪತ್ರೆಯ ಓಪಿಡಿಯನ್ನೂ ಬಂದ್ ಮಾಡಿಸಿದ್ರು.
ಸೋಜಿಗವೆಂದರೇ, ಅದೇ ಆಸ್ಪತ್ರೆಯ ಪಕ್ಕದಲ್ಲಿರುವ ಕಲಾಕ್ಷೇತ್ರದಲ್ಲಿ ಇದೀಗ ಮದುವೆ ನಡೆಯುತ್ತಿದೆ. ಈ ಬಗ್ಗೆ ಕೇಳಿದ್ರೇ, ಅವರು ಮೊದಲೇ ನಿರ್ಧಾರ ಮಾಡಿದ್ರು. ಕಡಿಮೆ ಜನರು ಭಾಗವಹಿಸ್ತಾರೆ. ಅವರೆಲ್ಲರೂ ಎರಡು ಡೋಸ್ ಪಡೆದವರೇ ಆಗಿರ್ತಾರೆ. ಸ್ವತಃ ನಾವೇ ಹೋಗಿ ಅವಲೋಕನ ಮಾಡಿಕೊಂಡು ಬಂದಿದ್ದೇವೆ ಎನ್ನುತ್ತಾರೆ.
ಅಚ್ಚರಿ ಪಡುವ ಸಂಗತಿ ಇರುವುದು, ವೈದ್ಯಕೀಯ ಕಾಲೇಜಿನಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾದ ಬಹುತೇಕರು ಎರಡು ಡೋಸ್ ಪಡೆದವರಿದ್ದಾರೆ. ಅದು ಈ ಮದುವೆಗೆ ಅನ್ವಯಿಸುವುದಿಲ್ವಾ.
ಪ್ರತಿ ಬಾರಿಯೂ ಸಂಕಷ್ಟವನ್ನ ಅನುಭವಿಸಲು ಬಡವರು ರೆಡಿಯಿರ್ತಾರೆ. ಶ್ರೀಮಂತರಿಗೆ ಕಾನೂನು ಅವರಿಗೆ ಬೇಕಾದ ರೀತಿಯಲ್ಲಿ ಬದಲಾವಣೆಯಾಗತ್ತೆ. ಓಪಿಡಿಗೆ ಇಪ್ಪತ್ತು ಜನರನ್ನ ಬಿಡಲು ಆಗೋದಿಲ್ಲವೆನ್ನುವ ಜಿಲ್ಲಾಡಳಿತ, ಮದುವೆಗೆ ಮಾತ್ರ ಅವಕಾಶ ನೀಡಿದ್ದು ಮಾತ್ರ ಅಗೋಚರ.