ಧಾರವಾಡ ಜಿಲ್ಲಾ ಪಂಚಾಯತಿ ಸೀಲ್ ಡೌನ್: ಎರಡು ದಿನ ನಿಮ್ಮ ಕೆಲ್ಸಾ ಇದ್ರೂ ಹೋಗಬೇಡಿ..

ಧಾರವಾಡ: ಕೊರೋನಾ ಪಾಸಿಟಿವ್ ಪ್ರಕರಣಗಳು ಧಾರವಾಡ ಜಿಲ್ಲೆಯನ್ನೂ ಅತಿಯಾಗಿ ಬಾಧಿಸತೊಡಗಿದ್ದು, ಹಲವು ಸರಕಾರಿ ಕಚೇರಿಗಳಿಗೂ ಇದು ಹಬ್ಬುತ್ತಿದೆ. ಇದೀಗ ಜಿಲ್ಲಾ ಪಂಚಾಯತಿಗೂ ವಕ್ಕರಿಸಿದ್ದು, ಇಂದು ಜಿಲ್ಲಾ ಪಂಚಾಯತಿ ಕಚೇರಿಯನ್ನ ಸೀಲ್ ಡೌನ್ ಮಾಡಲಾಗುತ್ತಿದೆ.
ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಕಚೇರಿಯನ್ನ ಸೀಲ್ ಡೌನ್ ಮಾಡಲಾಗಿದ್ದು, ಕೆಲ ಸಮಯದ ನಂತರ ಸ್ಯಾನಿಟೈಸರ್ ಮಾಡಲಿದ್ದಾರೆ.
ಕೆಲವು ದಿನಗಳಿಂದ ರೋಗದ ಲಕ್ಷಣಗಳಿದ್ದರೂ ನಿನ್ನೆಯಷ್ಟೇ ಪಾಸಿಟಿವ್ ಇರುವುದು ದೃಢಪಟ್ಟಿದ್ದರಿಂದ ಕಚೇರಿಗೆ ಬೀಗ ಹಾಕಲಾಗಿದ್ದು, ಅನಿವಾರ್ಯವಾಗಿಯೂ ಯಾವುದೇ ಕಾರ್ಯಗಳು ಇಂದು ನಡೆಯುವುದಿಲ್ಲವೆಂದು ಗೊತ್ತಾಗಿದೆ.
ಜಿಲ್ಲಾ ಪಂಚಾಯತಿಯ ಹಿರಿಯ ಅಧಿಕಾರಿಗೂ ಕೊರೋನಾ ಬಂದಿರುವುದು ದೃಢಪಟ್ಟಿದ್ದು, ಜಿಲ್ಲಾ ಪಂಚಾಯತಿಯ ಕಾರ್ಯ ವೈಖರಿ ಕೆಲವೊಂದಿಷ್ಟು ಸಮಯ ವಿಳಂವಾಗಲಿದೆ.
ಜಿಲ್ಲಾ ಪಂಚಾಯತಿ ಸದಸ್ಯರು, ಸಾರ್ವಜನಿಕರು ಕಚೇರಿಗೆ ಹೋಗುವ ಕೆಲಸವಿದ್ದರೇ ಮೊದಲೇ ತಿಲಿದುಕೊಂಡು ಹೋಗಿ, ಇಲ್ಲದಿದ್ದರೇ ಹಾಗೇ ಬಂದು ಹೀಗೆ ಹೋಗಬೇಕಾಗುತ್ತದೆ.