Posts Slider

Karnataka Voice

Latest Kannada News

ಧಾರವಾಡ ನಾಯಕರಿಗೆ ಬೇಡವಾದರಾ ಮಾಜಿ ಸಚಿವ ವಿನಯ ಕುಲಕರ್ಣಿ…!?

Spread the love

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕಾಲದಲ್ಲಿ ವಿನಯ ಕುಲಕರ್ಣಿಯವರ ಭಾವಚಿತ್ರವನ್ನ ಹೇಳದೇ ಕೇಳದೇ ಹಾಕಿಕೊಳ್ಳುತ್ತಿದ್ದವರು.. ಇಂದೂ…

ಧಾರವಾಡ: ಹುಬ್ಬಳ್ಳಿ-ಧಾರವಾಡ ಪಶ್ಚಿಮ-74ನೇ ವಿಧಾನಸಭಾ ಕ್ಷೇತ್ರದ ರಾಣಿ ಚೆನ್ಮಮ್ಮ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ವಾರ್ಡ್ ಸಂಖ್ಯೆ 10ರ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿಯವರ ಭಾವಚಿತ್ರವನ್ನೇ ಮರೆಯಲಾಗಿದೆ.

ಮಾಜಿ ಸಚಿವ ವಿನಯ ಕುಲಕರ್ಣಿಯವರ ಭಾವಚಿತ್ರವನ್ನ ಕಳೆದ ಬಾರಿ ಹುಬ್ಬಳ್ಳಿಯಲ್ಲಿ ನಡೆದ ವಿಭಾಗೀಯ ಕಾಂಗ್ರೆಸ್ ಸಮಾವೇಶದಲ್ಲಿ ಹಾಕದೇ ಇರುವುದರಿಂದ ಹಲವರು ಬೇಸರಗೊಂಡಿದ್ದರು. ಈಗ ಅಂತಹದೇ ಸ್ಥಿತಿ ಶಹರದಲ್ಲಿಯೂ ಆರಂಭವಾಗಿದೆ.

ಇದು ಒಂದು ಕ್ಷೇತ್ರಕ್ಕೆ ಸಿಮೀತವಾದ ಕಾರ್ಯಕ್ರಮ ಎನ್ನುವವರು ಇದ್ದಾರೆ. ಇದೇ ಜನ ವಿನಯ ಕುಲಕರ್ಣಿಯವರು ಮಂತ್ರಿಯಿದ್ದಾಗ, ಇಂತಹದ್ದೆ ವೇದಿಕೆಯಲ್ಲಿ ದೊಡ್ಡದೊಂದು ಬ್ಯಾನರ್ ಮಾಡಿ, ಪೋಟೊ ಹಾಕಿದ್ದನ್ನ ಸ್ಮರಿಸಿಕೊಳ್ಳುವುದು ಉಚಿತವಲ್ಲವೇ…

ಪಶ್ಚಿಮ ಮತಕ್ಷೇತ್ರದಲ್ಲಿರದ  ಹಲವರ ಭಾವಚಿತ್ರಗಳು ಬ್ಯಾನರಲ್ಲಿ ಹಾಕಲಾಗಿದೆ. ಆದರೆ, ಪಕ್ಷದ ಮುಂಚೂಣಿಯಲ್ಲಿದ್ದ ಮಾಜಿ ಸಚಿವ ವಿನಯ ಕುಲಕರ್ಣಿಯವರ ಭಾವಚಿತ್ರವನ್ನನ ಕಡೆಗಣಿಸಲಾಗಿದೆ ಎಂಬುದು ಹಲವು ಕಾರ್ಯಕರ್ತರ ಬೇಸರಕ್ಕೆ ಕಾರಣವಾಗಿದೆ.

ಕಾರ್ಯಕ್ರಮದಲ್ಲಿ ಮಹಾನಗರ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಅಂಜುಮನ ಸಂಸ್ಥೆಯ ಮಾಜಿ ಅಧ್ಯಕ್ಷ ಇಸ್ಲಾಯಿಲ್ ತಮಾಟಗಾರ, ದಾನಪ್ಪ ಕಬ್ಬೇರ, ಶಾರೂಕ ಮುಲ್ಲಾ, ಯಾಸೀನ  ಹಾವೇರಿಪೇಟೆ, ಬಸವರಾಜ ಮಲಕಾರಿ ಸೇರಿದಂತೆ ಹಲವರು ಭಾಗವಹಿಸಿದ್ದರೂ, ಮಾಜಿ ಸಚಿವ ವಿನಯ ಕುಲಕರ್ಣಿಯವರ ಬಗ್ಗೆ ಚಕಾರವೆತ್ತದೇ ಇರುವುದು ಸೋಜಿಗವೇ ಸರಿ.


Spread the love

Leave a Reply

Your email address will not be published. Required fields are marked *