ಗುಡಿಕಳ್ಳ “ಮಾಬ್ಯಾ”ನ ಬಂಧನ…!

ಧಾರವಾಡ: ದೇವಸ್ಥಾನಗಳ ಹುಂಡಿಯನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಓರ್ವನನ್ನ ಬಂಧನ ಮಾಡುವಲ್ಲಿ ಧಾರವಾಡದ ವಿದ್ಯಾಗಿರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಸ್ಕೂಟರ್ ಕಳ್ಳತನ ಮಾಡಿ, ಅದರಿಂದಲೇ ದೇವಸ್ಥಾನಗಳನ್ನ ಹುಡುಕಿ ಕಳ್ಳತನ ಮಾಡುತ್ತಿದ್ದ ಧಾರವಾಡ ರಾಜೀವಗಾಂಧಿನಗರದ ಮಹಬೂಬಅಲಿ ಅಲಿಯಾಸ್ ಮಾಬುಲಿ ಅಲಿಯಾಸ್ ಮಾಬ್ಯಾ ಬಾಬುಸಾಬ ಅತ್ತಾರ ಎಂಬಾತನನ್ನೇ ವಿದ್ಯಾಗಿರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಮಾಬ್ಯಾ, ಕಳೆದ ಏಳೆಂಟು ತಿಂಗಳ ಹಿಂದೆ ಹೊಸಯಲ್ಲಾಪೂರದಲ್ಲಿ ಸ್ಕೂಟರ್ ಹಾಗೂ ಮಂಗಳವಾರ ಪೇಟೆಯಲ್ಲಿರುವ ಮುದಿಮಾರುತಿ ದೇವಸ್ಥಾನದಲ್ಲಿದ್ದ ಕಾಣಿಕೆ ಪೆಟ್ಟಿಗೆಯನ್ನ ಒಂದು ತಿಂಗಳ ಹಿಂದೆ ಕಳ್ಳತನ ಮಾಡಿರುವುದನ್ನ ಒಪ್ಪಿಕೊಂಡಿದ್ದಾನೆ.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿದ್ಯಾಗಿರಿ ಇನ್ಸಪೆಕ್ಟರ್ ಎಂ.ಕೆ.ಬಸಾಪೂರ ನೇತೃತ್ವದಲ್ಲಿ ಪಿಎಸ್ಐಗಳಾದ ಸಚಿನಕುಮಾರ ದಾಸರೆಡ್ಡಿ, ಎಸ್.ಆರ್.ತೇಗೂರ, ಎಎಸ್ಐ ಬಿ.ಎಂ.ಅಂಗಡಿ, ಎ.ಬಿ.ನರೇಂದ್ರ, ಎಂ.ಎಫ್.ನದಾಫ, ಐ.ಪಿ.ಬುರ್ಜಿ, ಆರ್.ಕೆ.ಅತ್ತಾರ, ಎಂ.ಸಿ.ಮಂಕಣಿ, ಬಿ.ಎಂ.ಪಠಾತ, ಎಂ.ಜಿ.ಪಾಟೀಲ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಆರೋಪಿಯನ್ನ ಬಂಧನ ಮಾಡಿದ್ದಾರೆ.