ಧಾರವಾಡ ವಿದ್ಯಾಗಿರಿ ಠಾಣೆ ಇನ್ಸಪೆಕ್ಟರ್ ಸೇರಿ “ಆರು” ಸಿಬ್ಬಂದಿ ಮಾಡಿದ್ದೇನು ಗೊತ್ತಾ…!!??
1 min readಧಾರವಾಡ: ಅನ್ಯಾಯವಾದಾಗ ನ್ಯಾಯ ಸಿಗುವ ಭರವಸೆಯನ್ನ ಇಟ್ಟುಕೊಂಡು ಪೊಲೀಸ್ ಠಾಣೆಗೆ ಹೋಗಿದ್ದ ವ್ಯಕ್ತಿಯೋರ್ವನನ್ನ ದುರ್ಬಳಕೆ ಮಾಡಿಕೊಂಡು ಆತನನ್ನ ಬೀದಿಗೆ ತರುವಲ್ಲಿ ಧಾರವಾಡದ ವಿದ್ಯಾಗಿರಿ ಠಾಣೆಯ ಇನ್ಸಪೆಕ್ಟರ್ ಸೇರಿದಂತೆ 3ಎಸ್ಬಿ+1LPC ಯಶಸ್ವಿಯಾಗಿದ್ದಾರೆಂದು ಖಚಿತ ಮೂಲಗಳು ಹೇಳಿವೆ.
ವಿದ್ಯಾಗಿರಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯೊಂದರ ಮಾಹಿತಿಯನ್ನ ತಮಗೆ ಕರ್ನಾಟಕವಾಯ್ಸ್.ಕಾಂ ನೀಡುತ್ತಿದೆ. ಆರಕ್ಷಕರು ಕೊರೋನಾ ಬಂದು ಹೋಗಿ ಬಂದು ಹೋಗಿ ಜೀವದ ಕಿಮ್ಮತ್ತನ್ನ ತೋರಿಸಿಕೊಟ್ಟ ಮೇಲೂ ಎಷ್ಟೊಂದು ಭ್ರಷ್ಟರಾಗಿದ್ದಾರೆ ಎಂದು ತಿಳಿಯುತ್ತದೆ.
ಅಸಲಿ ಕಥೆ: ಬಾಬುಸಾಹೇಬ ಲಾಲಶಾ ಎಂಬಾತ ಲೋನ್ ಮಾಡಿಸಿ ದುಡಿಸಲು ಲಾರಿಯೊಂದನ್ನ ಪಡೆದು ಮಲ್ಲಿಕಜಾನ ಹೊಳಿ (ಪೈಲ್ವಾನ್ ರಹಿಮಾನ ಹೊಳಿ ಸಂಬಂಧಿ) ಎಂಬಾತನಿಗೆ ನೀಡಿರುತ್ತಾನೆ. ಆತ ಆರು ತಿಂಗಳಾದರೂ ಯಾವುದೇ ಲೆಕ್ಕ ಕೊಡದೇ ಇದ್ದಾಗ ಬಾಬುಸಾಹೇಬ, ಲಾರಿಯನ್ನ ಕೇಳಲು ಆರಂಭಿಸುತ್ತಾನೆ. ಅಲ್ಲಿಂದ ಶುರುವಾಗುವುದೇ ಅಸಲಿ ಕಹಾನಿ.
ಬಾಬಾಬುಸಾಹೇಬನ ಒತ್ತಡ ಹೆಚ್ಚಾಗುತ್ತಿದ್ದ ಹಾಗೇ ಮಲ್ಲಿಕಜಾನ ಹೊಳಿ ಆ ಲಾರಿಯನ್ನ ಫೀಸ್ ಫೀಸ್ ಮಾಡಿ, ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ‘ಮೊಡ್ಕಾ’ದವನಿಗೆ ಮಾರಾಟ ಮಾಡಿ, ಲಾರಿ ಕಳುವಾಗಿದೆ ಎಂದು ಬಾಬುಸಾಹೇಬನಿಗೆ ಸುಳ್ಳು ಹೇಳಿ, ವಿದ್ಯಾಗಿರಿ ಪೊಲೀಸ್ ಠಾಣೆಗೆ ಆರೋಪಿಯೇ ಕರೆದುಕೊಂಡು ಹೋಗ್ತಾನೆ.
ಇಲ್ಲಿಂದ ಪೊಲೀಸ್ ಕಹಾನಿ ಶುರುವಾಗತ್ತೆ. ಲಾರಿ ಮಾಲೀಕ ಬಾಬುಸಾಹೇಬ ಆಗಿದ್ದರಿಂದ ಆತನಿಂದ ದೂರನ್ನ ಪಡೆಯಬೇಕಾಗಿರತ್ತೆ. ಆದರೆ, ಪೊಲೀಸರು ಮಲ್ಲಿಕಜಾನ ಹೊಳಿಯನ್ನ ಬೆದರಿಸಿದಾಗ ‘ಆತ ಸತ್ಯ ಒಪ್ಪಿಕೊಳ್ಳುತ್ತಾನೆ’ ಅದೇ ಸಮಯದಲ್ಲಿ ಪೊಲೀಸರು ತಮ್ಮ ನೀಚತನವನ್ನ ಮುನ್ನೆಲೆಗೆ ತರುತ್ತಾರೆ.
ಮಾಲೀಕನಿಂದ ದೂರು ಪಡೆಯದೇ ಹಳೇಹುಬ್ಬಳ್ಳಿ ‘ಮೊಡ್ಕಾ’ದ ಮೇಲೆ ಇನ್ಸಪೆಕ್ಟರ್ ಪಟಾಲಂ ದಾಳಿಯಾಡುವ ಡ್ರಾಮಾ ಸೃಷ್ಟಿಸಿ ಮಾಹಿತಿ ಪ್ರಕಾರ ಆರೂವರೆ ಲಕ್ಷ ರೂಪಾಯಿ ಚೆಂಬು ಮಾಡ್ತಾರೆ. ಅಲ್ಲಿಂದ ಲಾರಿ ಫೀಸ್ ಫೀಸ್ ಮಾಡಿದ್ದ ಆರೋಪಿಗೆ ಕಥೆ ಹೇಳಿ, ‘ಲಾರಿ ಕಳೆದುಹೋಗಿದೆ ಎಂದು ಎಫ್‌ಐಆರ್ ಕೊಡ್ತೇವಿ. ನಿನ್ನ ಕೇಸಿನಲ್ಲಿ ಸೇರಿಸಲ್ಲ’ ಎಂದು ಹೇಳಿ ಎರಡೂವರೆ ಲಕ್ಷ ರೂಪಾಯಿಯಿಂದ ಆರಂಭಿಸಿ ಒಂದೂವರೆ ಲಕ್ಷ ರೂಪಾಯಿ ಪಡೆಯುತ್ತಾರೆ. ತದನಂತರ ಪೊಲೀಸ್ ಕಮೀಷನರ್ ಲಾಬುರಾಮ್ ಅವರು ವರ್ಗಾವಣೆಯಾದ ಮರುದಿನವೇ ಎಫ್ಐಆರ್ ಕೊಡುವ ಮಾತುಕತೆ ಆಗತ್ತೆ.
ಅಸಲಿಗೆ ಫೀಸ್ ಫೀಸ್ ಆಗಿದ್ದ ಲಾರಿಯ ಇನ್ಸೂರೆನ್ಸ್ ದಿನಾಂಕ ಮುಗಿದ ಮೇಲೆಯೂ ಎಫ್ಐಆರ್ ನೀಡೋದಿಲ್ಲ. ಏಕಂದ್ರೇ, ಪೊಲೀಸ್ ಕಮೀಷನರ್ ವರ್ಗಾವಣೆ ಆಗಿರಲ್ಲ. ಇಷ್ಟೇಲ್ಲಾ, ರಗಳೆಯಾದ ನಂತರ ಸ್ಥಳೀಯ ಮಾಧ್ಯಮವೊಂದರಲ್ಲಿ ಈ ಬಗ್ಗೆ ಬಾಬುಸಾಹೇಬ ಮಾತಾಡ್ತಾನೆ. ಅಲ್ಲಿಂದ ಪ್ರಕರಣ ಪೊಲೀಸ್ ಕಮೀಷನರ್ ಟೇಬಲ್ ಗೆ ಬೀಳತ್ತೆ.
ಈಗ ಎಫ್ಐಆರ್ ದಾಖಲು ಮಾಡಲಾಗಿದೆ. ಮೂಲ ಆರೋಪಿ ಮಲ್ಲಿಕಜಾನನ್ನ ವಶಕ್ಕೆ ಪಡೆದಿದ್ದಾರೆ. ಆರೋಪಿ ಹಾಗೂ ಮೊಡ್ಕಾದಿಂದ ಚೆಂಬು ಮಾಡಿದವರು “ಸತ್ಯ ಹರಿಶ್ಚಂದ್ರನ” ಸೋಗು ಹಾಕಿಕೊಂಡು ಅಲೆಯುತ್ತಿದ್ದಾರೆ. ನಿಜವಾದ ಮೋಸಕ್ಕೆ ಹೋದವ ಬೀದಿ ಬೀದಿ ಅಲೆಯುತ್ತಿದ್ದಾನೆ.
ಪೊಲೀಸ್ ಕಮೀಷನರ್ ಲಾಬುರಾಮ್ ಸರ್, ಇವರು ನಿಮ್ಮ ವರ್ಗಾವಣೆ ಆಗುತ್ತದೆ ಎಂದುಕೊಂಡೇ ಮೋಸ ಮಾಡಲು ಮುಂದಾದವರು. ಇಂಥವರ ವಿರುದ್ಧ ಕ್ರಮ ಜರುಗಿಸಲು ತಾವೂ ಮೀನ ಮೇಷ ಎಣಿಸುತ್ತಿರುವುದು ಏಕೆ… ಉತ್ತರದ ನಿರೀಕ್ಷೆಯಲ್ಲಿ.