Posts Slider

Karnataka Voice

Latest Kannada News

ವೀರಶೈವ ಮಹಾಸಭಾ “ಧಾರವಾಡ” ಬಿದ್ದ ‘1971’ ಮತಗಳು ಹೋಗಿದ್ಯಾರಿಗೆ….!?

Spread the love

ಧಾರವಾಡ: ಅತೀವ ಪ್ರಮಾಣದಲ್ಲಿ ಚರ್ಚೆಯ ಜೊತೆಗೆ ಕುತೂಹಲ ಮೂಡಿಸಿರುವ ಅಖಿಲ ಭಾರತ ವೀರಶೈವ ಮಹಾಸಭಾದ ಧಾರವಾಡ ಜಿಲ್ಲಾ ಘಟಕದ ಚುನಾವಣೆಯ ಫಲಿತಾಂಶದ ಕ್ಷಣಗಣನೆ ಆರಂಭವಾಗಿದೆ.

ಬೆಳಿಗ್ಗೆಯಿಂದ ನಡೆದಿರುವ ಮತದಾನದಲ್ಲಿ ಹೊಸಬರು ಹೆಚ್ಚು ಮತಗಳು ಹಾಕಿರುವ ಸಂಭವವಿದೆ ಎನ್ನಲಾಗಿದ್ದು, ಒಟ್ಟು 2800ಕ್ಕೂ ಹೆಚ್ಚು ಮತಗಳ ಪೈಕಿ 1971 ಮತದಾರರು ಮತ ಚಲಾಯಿಸಿದ್ದಾರೆ.

ಹಾಲಿ ಅಧ್ಯಕ್ಷ ಗುರುರಾಜ ಹುಣಸಿಮರದ ಅವರನ್ನ ಸೋಲಿಸಲು ಸರ್ವ ರೀತಿಯ ತಂತ್ರಗಳನ್ನ ಹೆಣೆಯಲಾಗಿದ್ದು, ಹಾಲಿ ಶಾಸಕರಿಬ್ವರು ಹೊಸ ಮುಖವನ್ನ ಅಧ್ಯಕ್ಷಗಿರಿಗೆ ಅಭ್ಯರ್ಥಿ ಮಾಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.

ಇನ್ನೂ ಕೆಲವೇ ಸಮಯದಲ್ಲಿ ಮತ ಎಣಿಕೆ ಆರಂಭಗೊಳ್ಳಲಿದ್ದು, ಯಾರಿಗೆ ವಿಜಯಮಾಲೆ ದೊರಕಲಿದೆ ಎಂಬುದನ್ನ ಕಾದು ನೋಡಬೇಕಿದೆ.


Spread the love

Leave a Reply

Your email address will not be published. Required fields are marked *