Posts Slider

Karnataka Voice

Latest Kannada News

ಧಾರವಾಡ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ 2.5%- ಆದರೂ ಲಾಕ್ ಡೌನ್ ಅನ್ ಲಾಕ್ ಇಲ್ವಂತೆ: ಇದ್ಯಾವ ನ್ಯಾಯ ಸ್ವಾಮಿ…!

1 min read
Spread the love

ಧಾರವಾಡ: ಸೋಮವಾರದಿಂದ ರಾಜ್ಯದ 16 ಜಿಲ್ಲೆಗಳಲ್ಲಿ ಅನ್ ಲಾಕ್ ಘೋಷಣೆ ಮಾಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಧಾರವಾಡ ಜಿಲ್ಲೆಯಲ್ಲೂ ಪಾಸಿಟಿವಿಟಿ ರೇಟ್ 2.5% ಆಗಿರುವುದು ಗೊತ್ತಾಗದೇ ಇರುವುದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.

ಇಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿಯಿಂದ ಪ್ರತಿದಿನವೂ ಮಾಹಿತಿ ಕೊಡುವ ವಾರ್ತಾ ಇಲಾಖೆಯ ಅಧಿಕಾರಿಗಳು ಪಾಸಿಟಿವಿಟಿ ರೇಟ್ ನ್ನ ತಿಳಿಸಿದ್ದಾರೆ. ಹಾಗಾದರೇ, ಯಾವುದು ಸುಳ್ಳು ಎಂಬುದನ್ನ ಸಾರ್ವಜನಿಕರಿಗೆ ತಿಳಿಸಬೇಕಿದೆ.

ಧಾರವಾಡ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ಧಾರವಾಡ ಜಿಲ್ಲೆಗೆ ಸರಿಯಾದ ಮಾಹಿತಿಯನ್ನ ನೀಡಬೇಕಿದೆ. ಪಾಸಿಟಿವಿಟಿ ರೇಟ್ 5% ಇದ್ದರೇ, ಅನ್ ಲಾಕ್ ಅಂದಾಗ, 2.5% ಅದಕ್ಕಿಂತ ಹೆಚ್ಚಾ ಎಂದು ಕೇಳುವಂತಾಗಿದೆ.


Spread the love

Leave a Reply

Your email address will not be published. Required fields are marked *

You may have missed