ಧಾರವಾಡ ನಾಳೆಯಿಂದ ಅನ್ ಲಾಕ್: ಜಗದೀಶ ಶೆಟ್ಟರ ಭರವಸೆ…!
1 min readಸಂಜೆಯೊಳಗೆ ಧಾರವಾಡ ಜಿಲ್ಲೆ ಅನ್ ಲಾಕ್ : ಸಚಿವ ಜಗದೀಶ ಶೆಟ್ಟರ್ ಭರವಸೆ ..!
ಹುಬ್ಬಳ್ಳಿ
ಸೋಮವಾರದಿಂದ ರಾಜ್ಯಾದ್ಯಂತ 16 ಜಿಲ್ಲೆಗಳನ್ನು ಅನ್ ಲಾಕ್ ಮಾಡಿ ರಾಜ್ಯ ಸರ್ಕಾರ ಆದೇಶ ನೀಡಿದೆ. ಆದ್ರೆ ಶೇ. 4.01 ರಷ್ಟು ಪಾಸಿಟಿವ್ ಇದ್ರು ಧಾರವಾಡ ಜಿಲ್ಲೆಗೆ ಅನ್ ಲಾಕ್ ಭಾಗ್ಯವಿಲ್ಲ. ಹೀಗಾಗಿ ಧಾರವಾಡ ಜಿಲ್ಲೆಯನ್ನ ಅನ್ಲಾಕ್ ಮಾಡಿ ಎಂದು ವರ್ತಕರ ಸಂಘ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಿದರು.
ವರ್ತಕರ ಬೇಡಿಕೆಗೆ ಸ್ಪಂದಿಸಿದ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್, ಆರೋಗ್ಯ ಸಚಿವರಿಗೆ ಕರೆ ಮಾಡಿ ಜಿಲ್ಲೆಯ ಪಾಸಿಟಿವಿಟಿ ರೇಟ್ ಬಗ್ಗೆ ಮಾಹಿತಿ ನೀಡಿ ಜಿಲ್ಲೆಯನ್ನ ಅನಲಾಕ್ ಮಾಡುವಂತೆ ಮನವಿ ಮಾಡಿದ್ರು. ಅಲ್ಲದೇ ಸಿಎಂ ಬಿಎಸ್ ವೈ ಹಾಗೂ ಮುಖ್ಯ ಕಾರ್ಯದರ್ಶಿ ಜೊತೆ ಮಾತನಾಡುವುದಾಗಿ ಭರವಸೆ ನೀಡಿದರು. ಸಿಎಂ ಗೆ ಕರೆ ಮಾಡಿ ವಾಸ್ತವ ಸ್ಥಿತಿಯನ್ನ ಹೇಳುತ್ತೇನೆ. ಈಗಾಗಲೇ ಆರೋಗ್ಯ ಸಚಿವ ಸುಧಾಕರ್ ಜೊತೆಯೂ ಚರ್ಚೆ ಮಾಡಿದ್ದೇನೆ. ಮಧ್ಯಾಹ್ನದ ನಂತರ ಜಿಲ್ಲಾಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಸಂಜೆಯೊಳಗೆ ಅನಲಾಕ್ ಮಾಡುವುದಾಗಿ ಭರವಸೆ ನೀಡಿದ್ರು.
ಸರ್ಕಾರ 10 ದಿನಗಳ ಪಾಸಿಟಿವಿಟಿ ರೇಟಿಂಗ್ ತೆಗೆದುಕೊಂಡಿರುವುದೇ ಅನ್ಲಾಕ್ ಆಗದಿರಲು ಕಾರಣವಾಗಿದೆ. ಇಂದು ಸಂಜೆಯೊಳಗೆ ಧಾರವಾಡ ಜಿಲ್ಲೆಯನ್ನ ಅನಲಾಕ್ ಮಾಡಿಸುವುದಾಗಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಭರವಸೆ ನೀಡಿದ್ದಾರೆ.