ಧಾರವಾಡದ “ಕವಿವಿ” ಸುತ್ತಮುತ್ತ ಜಂಗನೆ ಜಿಗಿದೋದ ಚಿರತೆ: ಹುಡುಕಾಟ…

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಬಳಿ ಚಿರತೆಯೊಂದನ್ನ ಮಹಿಳೆಯರು ನೋಡಿದ್ದಾರೆಂಬ ಆತಂಕ ಶುರುವಾಗಿದ್ದು, ಅರಣ್ಯ ಅಧಿಕಾರಿಗಳು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ಆರಂಭಿಸಿದ್ದಾರೆ.
ಧಾರವಾಡದ ಸೂರ್ಯನಗರ, ಭುವನೇಶ್ವರಿ ನಗರದ ಬಳಿ ಮಹಿಳೆಯರು ನೋಡಿದ್ದಾರೆಂದು ಗೊತ್ತಾಗಿದೆ. ಇದರಿಂದ ಸುತ್ತಮುತ್ತಲಿನ ಜನರು ಆತಂಕಕ್ಕೆ ಒಳಗಾಗಿದ್ದು, ಮನೆಯ ಬಾಗಿಲನ್ನ ಹಾಕಿಕೊಂಡು ಕೂಡುವ ಸ್ಥಿತಿ ನಿರ್ಮಾಣವಾಗಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದು, ಯಾವುದೇ ಕುರುಹು ಕಂಡು ಬಂದಿಲ್ಲವೆಂದು ಹೇಳಲಾಗಿದೆ.