ಧಾರವಾಡ ಸಂಚಾರಿ ಠಾಣೆಯ ಸಿಬ್ಬಂದಿಗಳ ಆರೋಗ್ಯ ಕಾಳಜಿ- ಒತ್ತು ನೀಡಿದ ಇನ್ಸಪೆಕ್ಟರ್ ಶ್ರೀನಿವಾಸ ಮೇಟಿ…!!!
ಧಾರವಾಡ: ಠಾಣೆಯಲ್ಲಿರುವ ಇನ್ಸಪೆಕ್ಟರ್ರವರಿಗೆ ತಮ್ಮ ಸಿಬ್ಬಂದಿಗಳ ಬಗ್ಗೆ ಕಾಳಜಿಯಿದ್ದರೇ, ಏನೇಲ್ಲ ನಡೆಯಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ನಿಂತಿದ್ದು ಧಾರವಾಡದ ಸಂಚಾರಿ ಪೊಲೀಸ್ ಠಾಣೆ.
ಹೌದು… ಇನ್ಸಪೆಕ್ಟರ್ ಶ್ರೀನಿವಾಸ ಮೇಟಿ ಅವರು ಕರ್ತವ್ಯದ ಜೊತೆಗೆ ಠಾಣೆಯ ಪ್ರತಿ ಸಿಬ್ಬಂದಿಗಳ ಆರೋಗ್ಯಕ್ಕಾಗಿ ಆರೋಗ್ಯ ತಪಾಸಣೆಯನ್ನ ಹಲವರ ಸಹಕಾರದಿಂದ ಠಾಣೆಯಲ್ಲಿ ನಡೆಸಿದರು.
ಪ್ರತಿ ಸಿಬ್ಬಂದಿಗಳು ಕರ್ತವ್ಯದ ಜೊತೆಗೆ ಆರೋಗ್ಯದ ತಪಾಸಣೆ ಮಾಡಿಸಿಕೊಂಡರು. ಇದೇ ಸಮಯದಲ್ಲಿ ಹಲವರು ರಕ್ತದಾನ ಮಾಡಿದರು.