ಕುಡುಕರಿಗೆ ಶಾಕ್ ನೀಡಿದ ಧಾರವಾಡ ಸಂಚಾರಿ ಠಾಣೆ ಪಿಐ ಮಲ್ಲನಗೌಡ ನಾಯ್ಕರ…!

ಧಾರವಾಡ: ತಡರಾತ್ರಿವರೆಗೂ ಕುಡಿದು ವಾಹನಗಳನ್ನ ಚಲಾಯಿಸಿಕೊಂಡು ಹೋಗುತ್ತಿದ್ದ ಹಲವರಿಗೆ ಧಾರವಾಡ ಸಂಚಾರಿ ಠಾಣೆ ಪೊಲೀಸರು, ಚಳಿಯಲ್ಲೂ ಬಿಸಿ ಮುಟ್ಟಿಸಿರುವ ಪ್ರಕರಣ ನಡೆದಿದೆ.
ತಡರಾತ್ರಿ ಫೀಲ್ಡಿಗೆ ಇಳಿದಿದ್ದ ಧಾರವಾಡ ಸಂಚಾರಿ ಠಾಣೆಯ ಇನ್ಸಪೆಕ್ಟರ್ ಮಲ್ಲನಗೌಡ ನಾಯ್ಕರ ಮತ್ತು ಟೀಂ ಹತ್ತು ಕೇಸ್ ಗಳನ್ನ ಹಾಕುವ ಮೂಲಕ, ಹಲವು ವಾಹನಗಳನ್ನ ವಶಕ್ಕೆ ಪಡೆದಿದ್ದಾರೆ.
ಸಂಚಾರಿ ನಿಯಮಗಳನ್ನ ಪಾಲಿಸಿ, ಮದ್ಯ ಸೇವನೆ ಮಾಡಿ ವಾಹನಗಳನ್ನ ಚಲಾಯಿಸಬೇಡಿ ಎಂದು ಹಲವು ಬಾರಿ ಹೇಳಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಸ್ವತಃ ಇನ್ಸಪೆಕ್ಟರ್ ತಮ್ಮ ಸಿಬ್ಬಂದಿಗಳೊಂದಿಗೆ ಫೀಲ್ಡಿಗೆ ಇಳಿದಿದ್ದರು.
ಮದ್ಯ ಸೇವನೆ ಮಾಡಿ ವಾಹನ ಸವಾರಿ ಮಾಡುತ್ತಿದ್ದವರನ್ನ ತಪಾಸಣೆ ಮಾಡಿದಾಗ, ಲಾರಿ, ಕಾರು ಹಾಗೂ ಬೈಕ್ ಸವಾರರು ಸಿಕ್ಕಿ ಬಿದ್ದಿದ್ದಾರೆ. ಅವರ ವಾಹನಗಳನ್ನ ವಶಕ್ಕೆ ಪಡೆದು ದಂಡವನ್ನ ಹಾಕಲಾಗಿದೆ.
ಇನ್ಸಪೆಕ್ಟರ್ ಜೊತೆಗೆ ಎಎಸ್ಐಗಳಾದ ಎಸ್.ಬಿ.ಶಿಂಧೆ, ಮಣಕವಾಡ ಹಾಗೂ ಸಿಬ್ಬಂದಿ ಸಾಥ್ ನೀಡಿದ್ದರು.