Posts Slider

Karnataka Voice

Latest Kannada News

ಕಾರು, ಬೈಕ್ ಕಳ್ಳರಿಬ್ಬರ ಬಂಧಿಸಿದ ಧಾರವಾಡ ಶಹರ ಠಾಣೆ ಪೊಲೀಸರು…!

Spread the love

ಧಾರವಾಡ: ಮೋಸತನದಿಂದ ಕಾರುಗಳನ್ನ ಒತ್ತೆಯಿಟ್ಟು ಬೈಕ್ ಕಳ್ಳತನ ಮಾಡಿದ ಇಬ್ಬರು ಆರೋಪಿಗಳನ್ನ ಬಂಧನ ಮಾಡುವಲ್ಲಿ ಧಾರವಾಡ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನ ಶಿವಮೊಗ್ಗ ಬಡಾವಣೆಯ ಗೋಪಾಲಗೌಡ ಪ್ರದೇಶದ ತಾಜುದ್ದೀನ ಅಲಿಯಾಸ್ ಶಾನು ಮಹಮ್ಮದರಫೀಕ ಹಾಗೂ ಧಾರವಾಡ ಬಾರಾ ಇಮಾಮ ಗಲ್ಲಿಯ ವಾಸೀಂ ಸಿಕಂದರ ಕುಸುಗಲ್ ಎಂದು ಗುರುತಿಸಲಾಗಿದೆ.

ಧಾರವಾಡದ ಹೆಬ್ಬಳ್ಳಿ ಅಗಸಿಯ ಬಳಿ ಬಂಧಿತ ಆರೋಪಿಗಳಿಂದ ಮೋಸತನದಿಂದ ಒತ್ತೆಯಿಟ್ಟಿದ್ದ ಏಳೂವರೆ ಲಕ್ಷ ಮೌಲ್ಯದ ಒಂದು ಕೀಯಾ ಹಾಗೂ ಸ್ವಿಪ್ಟ್ ಡಿಜೈರ್ ಕಾರನ್ನ ಹಾಗೂ ಒಂದು ಬೈಕನ್ನ ವಶಕ್ಕೆ ಪಡೆಯಲಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ ನೇತೃತ್ವದಲ್ಲಿ ಪಿಎಸ್ಐ ಎಲ್.ಕೆ.ಕೊಡಬಾಳ, ಎಎಸ್ಐಗಳಾದ ಎಂ.ವೈ.ಕುರ್ತಕೋಟಿ, ಪಿ.ಬಿ.ಕಾಳೆ ಸಿಬ್ಬಂದಿಗಳಾದ ಜಿ.ಜಿ.ಚಿಕ್ಕಮಠ, ಎಸ್.ಎಸ್.ಗಾಯಕವಾಡ, ಕೆ.ಎ.ಕೊಪ್ಪಳ, ವಿ.ಪಿ.ಕಿಲ್ಲೇದಾರ, ಸಿ.ಬಿ.ಅಗಸಿಮನಿ, ಉಮೇಶ ಸಣ್ಣಿಂಗನವರ, ಲಕ್ಷ್ಮಣ ಲಮಾಣಿ, ಬಸವರಾಜ ಕಡಕೋಳ, ಡಿ.ವೈ.ಮನ್ನಿಕೇರಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


Spread the love

Leave a Reply

Your email address will not be published. Required fields are marked *