Posts Slider

Karnataka Voice

Latest Kannada News

ಧಾರವಾಡ: ಕಾನೂನು ಸಂಘರ್ಷದಲ್ಲಿದ್ದವನಿಂದಲೇ “ಕೀಲಿ ಮುರಿದು-ಚಿನ್ನ ಬೆಳ್ಳಿ” ಲೂಟಿ ಮಾಡಿದ್ದ…

Spread the love

ಮನೆಗಳ್ಳತನ: ಕಾನೂನು ಸಂಘರ್ಷಕ್ಕೊಳಗಾದ ಬಾಲಕನ ಬಂಧನ, ₹3.12 ಲಕ್ಷ ಮೌಲ್ಯದ ಆಭರಣ ವಶ

ಧಾರವಾಡ: ನಗರದ ಮದಿಹಾಳದ ಸಿದ್ರಾಮ ಕಾಲನಿಯಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣವನ್ನು ಧಾರವಾಡ ಶಹರ ಪೊಲೀಸರು ಕೇವಲ 24 ಗಂಟೆಗಳಲ್ಲಿ ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಂಘರ್ಷಕ್ಕೊಳಗಾದ ಒಬ್ಬ ಬಾಲಕನನ್ನು ವಶಕ್ಕೆ ಪಡೆದು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಘಟನೆಯ ವಿವರ:

ಡಿಸೆಂಬರ್ 22ರಂದು ಸಿದ್ರಾಮ ಕಾಲನಿ ನಿವಾಸಿ ಸಚೀನ ಮಲ್ಲಪ್ಪ ಹೂಗಾರ ಅವರು ಮನೆಗೆ ಬೀಗ ಹಾಕಿಕೊಂಡು ಹೊರಗಡೆ ಹೋಗಿದ್ದ ಸಂದರ್ಭದಲ್ಲಿ ಕಳ್ಳತನ ನಡೆದಿತ್ತು. ಈ ಬಗ್ಗೆ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸ್ ಕಾರ್ಯಾಚರಣೆ:

ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹಾಗೂ ಉನ್ನತ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಅಲಿ ಶೇಖ ಮತ್ತು ತಂಡ ಕಾರ್ಯಾಚರಣೆ ನಡೆಸಿತ್ತು. ಡಿಸೆಂಬರ್ 23ರಂದು ಗೋವನಕೊಪ್ಪ ರಸ್ತೆಯಲ್ಲಿ ಬಾಲಕನನ್ನು ವಶಕ್ಕೆ ಪಡೆದ ಪೊಲೀಸರು, ಆತನಿಂದ 22 ಗ್ರಾಂ ಬಂಗಾರ ಹಾಗೂ 88 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಒಟ್ಟು ಮೌಲ್ಯ ಅಂದಾಜು 3,12,558 ರೂಪಾಯಿ ಎಂದು ತಿಳಿದುಬಂದಿದೆ.

​ತಕ್ಷಣವೇ ಪ್ರಕರಣ ಪತ್ತೆ ಹಚ್ಚಿದ ಪೊಲೀಸ್ ತಂಡದ ಕಾರ್ಯವೈಖರಿಯನ್ನು ಮೆಚ್ಚಿ ಪೊಲೀಸ್ ಆಯುಕ್ತರು ಬಹುಮಾನ ಘೋಷಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ತಂಡ:

ಈ ಕೆಳಗಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡವು ಯಶಸ್ವಿ ಕಾರ್ಯಾಚರಣೆ ನಡೆಸಿ ಕಳ್ಳತನವಾದ ಮಾಲನ್ನು ವಶಪಡಿಸಿಕೊಂಡಿದ್ದಾರೆ:

  1. ಶ್ರೀ ಅಲಿ ಶೇಖ (ಪೊಲೀಸ್ ಇನ್ಸ್‌ಪೆಕ್ಟರ್)
  2. ಶ್ರೀ ವಿನೋಧ ಡಿ. (ಪಿ.ಎಸ್.ಐ – ಕಾವಸು)
  3. ಶ್ರೀ ಆರ್.ಹೆಚ್. ನಧಾಪ (ಪಿ.ಎಸ್.ಐ – ಅವಿ)
  4. ಶ್ರೀ ಐ.ಪಿ. ಬುರ್ಜಿ
  5. ಶ್ರೀ ಆರ್.ಎಸ್. ಪಾಟೀಲ
  6. ಶ್ರೀ ಡಿ.ಕೆ. ನಧಾಪ
  7. ಶ್ರೀ ವಿ.ಎಸ್. ತಿರ್ಲಾಪೂರ
  8. ಶ್ರೀ ಸಂತೋಷ ಪೂಜಾರ
  9. ಶ್ರೀ ಜಿ.ಎಮ್. ಕೊಪ್ಪದ
  10. ಶ್ರೀ ಬಿ.ಎಲ್. ಹನಮಣ್ಣವರ

Spread the love

Leave a Reply

Your email address will not be published. Required fields are marked *

You may have missed