ಧಾರವಾಡದ ತೇಗೂರ ಬಳಿ ಅಪಘಾತ- ಮೆಣಸಿನಕಾಯಿ ವ್ಯಾಪಾರಿ ಸ್ಥಳದಲ್ಲಿ ಸಾವು…

ಧಾರವಾಡ: ಹುಬ್ಬಳ್ಳಿಯಲ್ಲಿ ಮೆಣಸಿನಕಾಯಿ ಮಾರಾಟ ಮಾಡಿ ಮರಳಿ ತನ್ನೂರಿಗೆ ಹೊರಟಿದ್ದ ಸಮಯದಲ್ಲಿ ಲಾರಿಗೆ ಮಹೇಂದ್ರ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ವ್ಯಾಪಾರಿ ಸ್ಥಳದಲ್ಲಿ ಸಾವಿಗೀಡಾದ ಘಟನೆ ತೇಗೂರ ಬಳಿ ಸಂಭವಿಸಿದೆ.
ಮೃತ ವ್ಯಾಪಾರಿಯನ್ನ ಖಾನಾಪುರ ತಾಲೂಕಿನ ಹಂದೂರು ಗ್ರಾಮದ ಬಸವರಾಜ ಹಂಗರಕಿ ಎಂದು ಗುರುತಿಸಲಾಗಿದೆ. ವಾಹನದಲ್ಲಿ ಕೂತ ಭಂಗಿಯಲ್ಲಿ ದುರ್ಮರಣಕ್ಕೀಡಾಗಿರುವುದು ಕಂಡು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಗರಗ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮುಂದಿನ ಕಾನೂನು ಕ್ರಮ ಜರುಗಿಸುತ್ತಿದ್ದಾರೆ.